ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪಾನ್-ಮಸಾಲಾ ಉಗುಳುವ ಘಟನೆಯ ನಂತರ, ಸ್ಪೀಕರ್ ಸತೀಶ್ ಮಹಾನಾ ಬುಧವಾರ ವಿಧಾನಸಭಾ ಆವರಣದಲ್ಲಿ ಪಾನ್-ಮಸಾಲಾ ಮತ್ತು ಗುಟ್ಕಾ ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ವಿಧಾನಸೌಧದ ಆವರಣದಲ್ಲಿ ಪಾನ್ ಮಸಾಲ ಮತ್ತು ಗುಟ್ಕಾ ಸೇವ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೂಚಿಸಲಾಗಿದೆ. ವಿಧಾನಸಭಾ ಆವರಣದಲ್ಲಿ ಯಾರಾದರೂ ಪಾನ್ ಮಸಾಲ ಮತ್ತು ಗುಟ್ಕಾ ಸೇವಿಸಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಮತ್ತು ಅವರ ವಿರುದ್ಧ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಾ ತಿಳಿಸಿದ್ದಾರೆ.
ಶಾಸಕರೊಬ್ಬರು ಪಾನ್ ಮಾಸಾಲ ತಿಂದು ವಿಧಾನಸಭೆಯ ಧ್ವಾರಕ್ಕೆ ಉಗುಳಿದ್ದರು. ಇದರಿಂದ ಕೋಪಗೊಂಡ ಸ್ಪೀಕರ್ ಸತೀಶ್ ಮಹಾನಾ ಅವರು ಸಿಬ್ಬಂದಿಯನ್ನು ಕರೆಸಿ ಸ್ವತಃ ಸ್ವಚ್ಛಗೊಳಿಸಿದ್ದರು. ಇದರಿಂದ ಕೋಪಗೊಂಡ ಸ್ಪೀಕರ್ ಅವರು ಇದೀಗ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಪೀಕರ್ ಅವರು, ವಿಧಾನಸೌಧದ ಧ್ವಾರಕ್ಕೆ ಪಾನ್ ಮಸಾಲ ಸೇವಿಸಿ ಉಗುಳಿರುವ ಬಗ್ಗೆ ಮಾಹಿತಿ ಸಿಕ್ಕಿತು. ಹೀಗಾಗಿ ಇಲ್ಲಿಗೆ ಬಂದು ಸ್ವಚ್ಛ ಮಾಡಿದ್ದೇನೆ. ವಿಡಿಯೋದಲ್ಲಿ ಶಾಸಕರನ್ನು ನೋಡಿದ್ದೇನೆ. ಆದರೆ ಯಾರನ್ನೂ ಅವಹೇಳನ ಮಾಡಲು ನಾನು ಬಯಸುವುದಿಲ್ಲ. ಆದರೆ ನಾನು ಅವರ ಹೆಸರು ಹೇಳುತ್ತಿಲ್ಲ.ಯಾರಾದರೂ ಈ ರೀತಿ ಮಾಡುವುದನ್ನು ಕಂಡರೆ ಅವರನ್ನು ತಡೆಯಬೇಕು ಎಂದು ಎಲ್ಲ ಸದಸ್ಯರಿಗೆ ಮನವಿ ಮಾಡುತ್ತೇನೆ ಎಂದರು.