Select Your Language

Notifications

webdunia
webdunia
webdunia
webdunia

ಸರ್ಕಾರದ ರಣಹೇಡಿತನದಿಂದ ಮತಾಂಧರು ಬಾಲ ಬಿಚ್ಚುತ್ತಿದ್ದಾರೆ: ಬಿಜೆಪಿ

Dharwad Communal Issue

Sampriya

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (15:52 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರದ ರಣಹೇಡಿತನ ನೋಡಿ ಮತಾಂಧರು ಬಾಲ ಬಿಚ್ಚುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ವೋಟ್‌ಬ್ಯಾಂಕ್‌ಗಾಗಿ ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ.

ಧಾರವಾಡ ಪಾಲಿಕೆ ಜಾಗದಲ್ಲಿ ಹಿಂದೂ ಮುಸ್ಲಿಂ ಬೋರ್ಡ್ ಜಟಾಪಟಿ ವಿಚಾರವಾಗಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದೆ.

ಹಲವು ವರ್ಷದಗಳಿಂದ ಒಂದು ಮರದ ಕೆಲಗೆ ಹನುಮಂತ, ಕರಿಯಮ್ಮ ಹಾಗೂ ನಾಗದೇವರುಗೆ ಪೂಜೆ ನಡೆಯುತ್ತಿದೆ. ಪಕ್ಕದ ಗಿಡದ ಕೆಳಗೆ ಮೆಹಬೂಬ ಸುಬಾನಿ ದರ್ಗಾದ ಕಲ್ಲು ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಪೋಸ್ಟ್‌ನಲ್ಲಿ ಹೀಗಿದೆ: ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರದ ರಣಹೇಡಿತನ ನೋಡಿ ಮತಾಂಧರು ಬಾಲ ಬಿಚ್ಚುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ವೋಟ್‌ಬ್ಯಾಂಕ್‌ಗಾಗಿ ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ.

ಧಾರವಾಡ ಮಹಾನಗರ ಪಾಲಿಕೆಯ ಸೂಪರ್ ಮಾರ್ಕೆಟ್‌ನ ಒಂದು ಜಾಗದಲ್ಲಿ ಕಳೆದ 50 ವರ್ಷಗಳಿಂದ ಹಿಂದೂಗಳು ಅರಳಿ ಮರದ ಕೆಳಗಿದ್ದ ಹನುಮಂತ, ಕರಿಯಮ್ಮ, ನಾಗದೇವರನ್ನು ಪೂಜಿಸಿಕೊಂಡು ಬರುತ್ತಿದ್ದರು.

ಆದರೆ ಕೆಲವು ಮತಾಂಧ ಕಿಡಿಗೇಡಿಗಳು ಅದೇ ಜಾಗದಲ್ಲಿ ಏಕಾಏಕಿ ಮಹೆಬೂಬ್ ಸಾಬ್ ದರ್ಗಾದ ಕಲ್ಲು ತಂದಿಟ್ಟು ಗಲಾಟೆ ಎಬ್ಬಿಸಿದ್ದಾರೆ.

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ತುಷ್ಟೀಕರಣ ರಾಜಕೀಯದ ಪುಕ್ಕಲುತನ ನೋಡಿ ನಾಳೆ ಸಿದ್ದರಾಮನ ಹುಂಡಿಯ ದೇವಸ್ಥಾನದಲ್ಲೂ ಮತಾಂಧರು ಇದೇ ರೀತಿ ಕಲ್ಲು ತಂದು ಇಟ್ಟರೂ ಅಚ್ಚರಿಯಿಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಸತ್ಯಕ್ಕೆ ಜೈ ಎನ್ನಿ, ರಾಜೀನಾಮೆ ಕೊಡಿ ಸಿದ್ದರಾಮಯ್ಯನವರೇ: ಸಿಟಿ ರವಿ