ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಲಭ್ಯರಿರಲ್ಲ. ಅವರ ಸ್ಥಾನದಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ.
ಮೊದಲ ಟೆಸ್ಟ್ ಪಂದ್ಯದ ವೇಳೆ ಶುಭಮನ್ ಗಿಲ್ ಕತ್ತು ನೋವಿಗೊಳಗಾಗಿದ್ದರು. ಬಳಿಕ ಅವರು ಬ್ಯಾಟಿಂಗ್ ಮಾಡಲಿಲ್ಲ, ಮೈದಾನಕ್ಕೂ ಇಳಿಯದೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಂಡದ ಜೊತೆಗೆ ಕೋಲ್ಕತ್ತಾದಿಂದ ತೆರಳಿದರೂ ಬಳಿಕ ಪ್ರತ್ಯೇಕವಾಗಿ ಫಿಸಿಯೋ ಜೊತೆ ತೆರಳಿದ್ದರು.
ಇದೀಗ ಅವರು ಎರಡನೇ ಟೆಸ್ಟ್ ಪಂದ್ಯಕ್ಕೂ ಲಭ್ಯರಿಲ್ಲ ಎನ್ನುವುದು ಖಚಿತವಾಗಿದೆ. ಅವರ ಸ್ಥಾನದಲ್ಲಿ ಉಪನಾಯಕ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಭ್ ಮೊದಲ ಪಂದ್ಯದಲ್ಲೂ ಗಿಲ್ ಅಲಭ್ಯತೆಯಲ್ಲಿ ತಂಡದ ನೇತೃತ್ವ ವಹಿಸಿದ್ದರು.
ಮೊದಲ ಟೆಸ್ಟ್ ಪಂದ್ಯ ಸೋತಿರುವ ಟೀಂ ಇಂಡಿಯಾ ಈಗ ಗುವಾಹಟಿಯಲ್ಲಿ ಶನಿವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ. ಈ ಪರಿಸ್ಥಿತಿಯಲ್ಲಿ ನಾಯಕನೂ ಅಲಭ್ಯರಾಗಿರುವುದು ತಂಡಕ್ಕೆ ಹೊಡೆತ ನೀಡಲಿದೆ.