ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಮುಕ್ತಾಯಗೊಂಡಿದ್ದು ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ಸಂಪೂರ್ಣ ವಿವರ.
ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ಈಗ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ. ಅತ್ತ ದಕ್ಷಿಣ ಆಫ್ರಿಕಾಗೆ ಭಾರತ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಸಾಧಿಸಲು ಎರಡನೇ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡರೂ ಸಾಕು.
ಆದರೆ ಭಾರತಕ್ಕೆ ಕಾಡುತ್ತಿರುವುದು ಬ್ಯಾಟಿಗರ ಪ್ರದರ್ಶನ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟಿಗರು ಗೊತ್ತು ಗುರಿಯಿಲ್ಲದಂತೆ ಬ್ಯಾಟಿಂಗ್ ಮಾಡಿದ್ದರು. ಇದೂ ಸಾಲದೆಂಬಂತೆ ನಾಯಕ ಶುಭಮನ್ ಗಿಲ್ ಕತ್ತು ನೋವಿಗೊಳಗಾಗಿದ್ದು ಎರಡನೇ ಟೆಸ್ಟ್ ಆಡುತ್ತಾರಾ ಎಂಬ ಸ್ಪಷ್ಟತೆಯಿಲ್ಲ.
ಇದರ ನಡುವೆ ಎರಡನೇ ಪಂದ್ಯಕ್ಕೆ ಇನ್ನು ನಾಲ್ಕು ದಿನಗಳಿವೆ. ಅಂದರೆ ನವಂಬರ್ 22 ರಿಂದ 26 ವರೆಗೆ ಎರಡನೇ ಟೆಸ್ಟ್ ಪಂದ್ಯ ಅಸ್ಸಾಂನ ಗುವಾಹಟಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವೂ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗುವುದು.