ಕೋಲ್ಕತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ಎದುರು ಪ್ರವಾಸೀ ತಂಡ ಜುಜುಬಿ 159 ರನ್ ಗಳಿಗೇ ಸರ್ವಪತನ ಕಂಡಿದೆ.
ಇಂದು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಟೀಂ ಇಂಡಿಯಾ ಬೌಲರ್ ಗಳು ವಿಶ್ವ ಚಾಂಪಿಯನ್ನರ ಗರ್ವಭಂಗಗೊಳಿಸಿದರು. ಅದರಲ್ಲೂ ಅನುಭವಿ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಆಫ್ರಿಕಾ 159 ಕ್ಕೆ ಆಲೌಟ್ ಆಯಿತು.
ಬುಮ್ರಾ ಇಂದು ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್ ನಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದರು. ಅವರಿಗೆ ಸಾಥ್ ನೀಡಿದ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಲಾ 2 ವಿಕೆಟ್ ಮತ್ತು ಅಕ್ಸರ್ ಪಟೇಲ್ 1 ವಿಕೆಟ್ ತಮ್ಮದಾಗಿಸಿಕೊಂಡರು. ಆದರೆ ಹಿರಿಯ ಸ್ಪಿನ್ನರ್ ರವೀಂದ್ರ ಜಡೇಜಾಗೆ ಯಾವುದೇ ವಿಕೆಟ್ ದಕ್ಕಲಿಲ್ಲ.
ಆಫ್ರಿಕಾ ಪರ ಆಡನ್ ಮಾರ್ಕರಮ್ 31 ರನ್ ಗಳಿಸಿದ್ದೇ ಗರಿಷ್ಠ. ಉಳಿದಂತೆ ರಾನ್ ರಿಕಲ್ಟನ್ 23, ಮುಲ್ಡರ್ 24, ಟೋನಿ ಡಿ ಝಾರ್ಝಿ 24 ರನ್ ಗಳಿಸಿದರು.