ದಿ ಗಬ್ಬಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟಿ20 ಪಂದ್ಯಕ್ಕೆ ಗುಡುಗು, ಮಿಂಚು ಅಡ್ಡಿಯಾಗಿದ್ದು, ಪಂದ್ಯ ರದ್ದಾಗಿದೆ. ಇದರೊಂದಿಗೆ ಟೀಂ ಇಂಡಿಯಾ 2-1 ರಿಂದ ಸರಣಿ ತನ್ನದಾಗಿಸಿಕೊಂಡಿದೆ.
ಇಂದು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಕೇವಲ 4.5 ಓವರ್ ಗಳಲ್ಲೇ ವಿಕೆಟ್ ನಷ್ಟವಿಲ್ಲದೇ 52 ರನ್ ಗಳಿಸಿತ್ತು. ಆಗ ಗುಡುಗು, ಮಿಂಚಿನಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಆದರೆ ಹವಾಮಾನದಲ್ಲಿ ಸುಧಾರಣೆ ಕಾಣದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಮೊದಲ ಪಂದ್ಯವೂ ಮಳೆಗೆ ಆಹುತಿಯಾಗಿತ್ತು. ಆದರೆ ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿದ್ದಿದ್ದರಿಂದ ಟೀಂ ಇಂಡಿಯಾವನ್ನೇ ಸರಣಿ ವಿಜೇತವೆಂದು ಘೋಷಿಸಲಾಯಿತು. ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಆಸ್ಟ್ರೇಲಿಯಾಕ್ಕೆ 2022 ರಿಂದ ತವರಿನಲ್ಲಿ ಟಿ20 ಸರಣಿಗಳಲ್ಲಿ ಸಿಗುತ್ತಿರುವ ನಾಲ್ಕನೇ ಸೋಲು ಇದಾಗಿದೆ. ವಿಶೇಷವೆಂದರೆ ಈ ಪೈಕಿ ಮೂರು ಬಾರಿಯೂ ಟೀಂ ಇಂಡಿಯಾ ವಿರುದ್ಧವೇ ಸೋಲಾಗಿದೆ.