ದಿ ಗಬ್ಬಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇಂದು ಟಾಸ್ ಗೆದ್ದು ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ಇತ್ತೀಚೆಗಿನ ವರದಿ ಬಂದಾಗ 4.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 52 ರನ್ ಗಳಿಸಿದೆ. ಭಾರತದ ಪರ ಓಪನರ್ ಗಳಾದ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಪೋಟಕ ಆರಂಭ ನೀಡಿದ್ದಾರೆ.
ಆದರೆ ಈಗ ಮೈದಾನದಲ್ಲಿ ಗುಡುಗು, ಮಿಂಚಿನ ವಾತಾವರಣವಿರುವ ಕಾರಣ ಸುರಕ್ಷತೆಯ ಕಾರಣಕ್ಕೆ ಆಟ ಸ್ಥಗಿತಗೊಂಡಿದೆ. ಗಿಲ್ 16 ಎಸೆತಗಳಿಂದ 29 ರನ್ ಗಳಿಸಿದರೆ ಅಭಿಷೇಕ್ 13 ಎಸೆತಗಳಿಂದ 23 ರನ್ ಗಳಿಸಿ ಆಡುತ್ತಿದ್ದಾರೆ. ಇಂದು ಅಭಿಷೇಕ್ ಗೆ ಈಗಾಗಲೇ ಎರಡು ಜೀವದಾನವೂ ಸಿಕ್ಕಿರುವುದು ವಿಶೇಷ.
ಇನ್ನು ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ ಅತೀ ವೇಗದ 1000 ರನ್ ಪೂರೈಸಿದ ದಾಖಲೆ ಮಾಡಿದರು. 28 ನೇ ಇನಿಂಗ್ಸ್ ನಲ್ಲಿ 189.39 ಸ್ಟ್ರೈಕ್ ರೇಟ್ ನಲ್ಲಿ ಅಭಿಷೇಕ್ ಶರ್ಮಾ 1000 ರನ್ ಪೂರೈಸಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡಿದ್ದು ಕೇವಲ 528 ಬಾಲ್!