ದಿ ಗಬ್ಬಾ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿದೆ. ಒಂದು ವೇಳೆ ಇಂದ ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ. ಇಲ್ಲದೇ ಹೋದರೆ ಸರಣಿ ಸಮಬಲಗೊಳ್ಳಲಿದೆ.
ಕಳೆದ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾಕ್ಕೆ ಭಾರತದ ಸ್ಪಿನ್ನರ್ ಗಳು ಕಾಡಿದ್ದರು. ಹೀಗಾಗಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇಂದಿನ ಪಿಚ್ ಗಮನಿಸಿದರೆ ಆರಂಭದಲ್ಲಿ ಬೌಲರ್ ಗಳಿಗೆ ನೆರವು ನೀಡುವ ಸಾಧ್ಯತೆಯಿದೆ.
ಇನ್ನು, ಭಾರತ ತಂಡ ತಿಲಕ್ ವರ್ಮಾ ಸ್ಥಾನದಲ್ಲಿ ರಿಂಕು ಸಿಂಗ್ ಗೆ ಅವಕಾಶ ನೀಡಿದೆ. ಈ ಪಂದ್ಯಕ್ಕೆ ಅತ್ತ ಆಸ್ಟ್ರೇಲಿಯಾ ತಂಡ ಮಾತ್ರ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯಲಿದೆ.