ದುಬೈ: 2028 ರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಕೂಡಾ ಸ್ಪರ್ಧಿಸಲಿದೆ. ಆದರೆ ಪಾಕಿಸ್ತಾನ ತಂಡ ಒಲಿಂಪಿಕ್ಸ್ ನಿಂದ ಔಟ್ ಆಗಿದ್ದು, ಭಾರತ ಸೇರಿದಂತೆ ಯಾವೆಲ್ಲಾ ತಂಡಗಳಿಗೆ ಅವಕಾಶ ಸಿಕ್ಕಿದೆ ನೋಡಿ.
ಅಮೆರಿಕಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ತಂಡಗಳನ್ನು ಆಯ್ಕೆ ಮಾಡಲು ಒಲಿಂಪಿಕ್ಸ್ ಸಮಿತಿ ಐಸಿಸಿಗೆ ಸೂಚಿಸಿತ್ತು. ಅದರಂತೆ ಐಸಿಸಿ ಮಂಡಳಿ ಸಭೆಯಲ್ಲಿ ಒಟ್ಟು 6 ತಂಡಗಳನ್ನು ಶ್ರೇಯಾಂಕದ ಆಧಾರದಲ್ಲಿ ಅಂತಿಮಗೊಳಿಸಲಾಗಿದೆ. ಅವುಗಳಲ್ಲಿ ಆಯಾ ಖಂಡಗಳಿಂದ ಯಾವ ತಂಡ ಹೆಚ್ಚು ಶ್ರೇಯಾಂಕ ಹೊಂದಿದೆಯೋ ಆ ತಂಡವನ್ನು ಆಧರಿಸಲಾಗಿದೆ.
ಅದರಂತೆ ಏಷ್ಯಾದಿಂದ ಅಗ್ರ ಶ್ರೇಯಾಂಕದಲ್ಲಿರುವ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಪಾಕಿಸ್ತಾನ ಔಟ್ ಆಗಿದೆ. ಓಷಿಯಾನಾದಲ್ಲಿ ಆಸ್ಟ್ರೇಲಿಯಾ ಅಗಗ್ರಸ್ಥಾನಿಯಾಗಿದೆ. ಯುರೋಪ್ ನಿಂದ ಇಂಗ್ಲೆಂಡ್, ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ ಹಾಗೂ ಇನ್ನೊಂದು ತಂಡವಾಗಿ ಅತಿಥೇಯ ಅಮೆರಿಕಾಗೆ ಅವಕಾಶ ಸಿಗಲಿದೆ. ಉಳಿದೊಂದು ತಂಡವನ್ನು ಜಾಗತಿಕ ಅರ್ಹತಾ ಸುತ್ತಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ಅರ್ಹತಾ ಸುತ್ತಿನ ಮೂಲಕ ಆಯ್ಕೆ ಮಾಡುವುದಾದರೆ ಶ್ರೇಯಾಂಕದ ಆಧಾರದಲ್ಲಿ ನ್ಯೂಜಿಲೆಂಡ್ ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.