Publish Date: Fri, 07 Nov 2025 (14:03 IST)
Updated Date: Fri, 07 Nov 2025 (14:08 IST)
ನವದೆಹಲಿ: ಮೊಹಮ್ಮದ್ ಶಮಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ ಎದುರಾಗಿದೆ.
ಟೀಂ ಇಂಡಿಯಾದಲ್ಲಿ ಫಿಟ್ ಆಗಿದ್ದರೂ ಅವಕಾಶ ಸಿಗದೇ ಹತಾಶೆಗೊಳಗಾಗಿರುವ ಮೊಹಮ್ಮದ್ ಶಮಿಗೆ ಮಾಜಿ ಪತ್ನಿ ರೂಪದಲ್ಲಿ ವೈಯಕ್ತಿಕ ಜೀವನದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಪತ್ನಿ ನೀಡಿದ ಅರ್ಜಿ ಮೇರೆಗೆ ಶಮಿಗೆ ಉನ್ನತ ನ್ಯಾಯಾಲಯ ನೋಟಿಸ್ ನೀಡಿದೆ.
ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ವಿಚ್ಛೇದನದ ಸಂದರ್ಭದಲ್ಲಿ ಹೈಕೋರ್ಟ್ ತಿಂಗಳಿಗೆ 1.5 ಲಕ್ಷ ರೂ. ಮತ್ತು ಮಗಳ ಆರೈಕೆಗೆ 2.5 ಲಕ್ಷ ರೂ. ನೀಡುವಂತೆ ಆದೇಶಿಸಿತ್ತು. ಆದರೆ ಇದು ಸಾಕಾಗಲ್ಲ ಎಂದು ಹಸೀನ್ ಜಹಾನ್ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಈ ಸಂಬಂಧ ವಿಚಾರಣೆಗಾಗಿ ಮೊಹಮ್ಮದ್ ಶಮಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಈ ಬಗ್ಗೆ ನಾಲ್ಕು ವಾರಗಳೊಳಗಾಗಿ ನೋಟಿಸ್ ಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಶಮಿ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ವಿಚಾರಣೆ ನಡೆಯಲಿದೆ.