ದಿ ಗಬ್ಬಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯ ಇಂದು ಗಬ್ಬಾ ಮೈದಾನದಲ್ಲಿ ನಡೆಯಲಿದ್ದು ಸರಣಿ ಗೆಲ್ಲಲು ಟೀಂ ಇಂಡಿಯಾಗೆ ಇದು ಉತ್ತಮ ಅವಕಾಶವಾಗಿದೆ.
ಏಕದಿನ ಸರಣಿ ಸೋತಿದ್ದ ಟೀಂ ಇಂಡಿಯಾಗೆ ಟಿ20 ಗೆಲ್ಲುವುದು ಪ್ರತಿಷ್ಠೆಯಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದರೂ ಕಳೆದ ಎರಡೂ ಪಂದ್ಯಗಳನ್ನು ಸತತವಾಗಿ ಗೆದ್ದು 2-1 ರಿಂದ ಮುನ್ನಡೆ ಸಾಧಿಸಿದೆ.
ಹಾಗಿದ್ದರೂ ಟೀಂ ಇಂಡಿಯಾಗೆ ಬ್ಯಾಟಿಗರ ಚಿಂತೆಯಿದೆ. ಯಾರೂ ಇದುವರೆಗೆ ದೊಡ್ಡ ಮೊತ್ತ ಗಳಿಸಿಲ್ಲ. ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ನೀಡಿದರು ದೊಡ್ಡ ಮೊತ್ತ ಗಳಿಸಿಲ್ಲ. ಶುಭಮನ್ ಗಿಲ್ ಟೆಸ್ಟ್ ಶೈಲಿಯ ಆಟವಾಡುತ್ತಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಿ ಎಂದು ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಟೀಂ ಇಂಡಿಯಾ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.
ಬೌಲಿಂಗ್ ನಲ್ಲೂ ಭಾರತ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಸ್ಪಿನ್ನರ್ ಗಳು ಅದ್ಭುತ ನಿರ್ವಹಣೆ ತೋರುತ್ತಿದ್ದಾರೆ. ಹೀಗಾಗಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.45 ಕ್ಕೆ ಆರಂಭವಾಗಲಿದೆ.