ಕೋಲ್ಕತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ದಕ್ಷಿಣ ಆಫ್ರಿಕಾ ಟೆಸ್ಟ್ ಚಾಂಪಿಯನ್ ಆದ ಬಳಿಕ ಭಾರತದಲ್ಲಿ ಆಡುತ್ತಿರುವ ಮೊದಲ ಪದ್ಯ ಇದಾಗಿದೆ. ಕೋಲ್ಕತ್ತಾದಲ್ಲಿ ಸ್ಪಿನ್ ಪಿಚ್ ನಿರೀಕ್ಷೆಯಿದ್ದು ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿ ಪಿಚ್ ನ ಲಾಭ ಪಡೆಯಲು ಹೊರಟಿದೆ.
ಈ ಪಂದ್ಯಕ್ಕೆ ಸ್ಪಿನ್ನರ್ ಗಳಾಗಿ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಕುತೂಹಲವಿತ್ತು. ಆದರೆ ಆಂತಿಮವಾಗಿ ಟೀಂ ಇಂಡಿಯಾ ಸ್ಪಿನ್ನರ್ ಗಳಾಗಿ ರನ್ನು ಆಯ್ಕೆ ಮಾಡಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡದಲ್ಲಿ ಪ್ರಮುಖ ವೇಗಿ ಕಗಿಸೊ ರಬಾಡ ಗಾಯದಿಂದ ಹೊರಗುಳಿದಿದ್ದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.
ಭಾರತ ತಂಡ ಇಂತಿದೆ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ (ಕ್ಯಾಪ್ಟನ್), ರಿಷಭ್ ಪಂತ್, ರವೀಂದ್ರ ಜಡೇಜಾ, ಧ್ರುವ ಜ್ಯುರೆಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.