ಕೋಲ್ಕತ್ತಾ: ಆಸ್ಟ್ರೇಲಿಯಾ ಸರಣಿಯಲ್ಲಿ ಕಾಲು ಮುರಿದಿದ್ರೂ ತಂಡಕ್ಕೆ ತೊಂದರೆಯಾಗಬಾರದು ಎಂದು ಕುಂಟುತ್ತಲೇ ಬಂದು ಬ್ಯಾಟಿಂಗ್ ಮಾಡಿದ್ದರು ರಿಷಭ್ ಪಂತ್. ಆದರೆ ನಾಯಕನಾಗಿದ್ದುಕೊಂಡು ಶುಭಮನ್ ಗಿಲ್ ಕುತ್ತಿಗೆ ನೋವಾಗುತ್ತದೆಂದು ಸಂಕಷ್ಟದಲ್ಲಿರುವ ತಂಡವನ್ನೇ ಬಿಟ್ಟು ಹೊರನಡೆದರು.. ಹೀಗಂತ ಈಗ ಗಿಲ್ ಟ್ರೋಲ್ ಆಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಕುತ್ತಿಗೆ ನೋವೆಂದು ಕೇವಲ 3 ಎಸೆತ ಎದುರಿಸಿ ಪೆವಿಲಿಯನ್ ಗೆ ಮರಳಿದವರು ಮೈದಾನಕ್ಕಿಳಿಯಲೇ ಇಲ್ಲ. ಭಾರತ ಎರಡೂವರೆ ದಿನದಲ್ಲೇ ಪಂದ್ಯ ಸೋತಿತು.
ಈ ಪಂದ್ಯದ ಬಳಿಕ ಅಭಿಮಾನಿಗಳು ಕ್ಯಾಪ್ಟನ್ ಗಿಲ್ ಮೇಲೆ ಸಿಟ್ಟಾಗಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ದವಡೆ ಮುರಿದರೂ ಬೌಲಿಂಗ್ ಮಾಡಿದ್ದರು. ರಿಷಭ್ ಪಂತ್ ಪಾದದ ಎಲುಬು ಮುರಿದಿದ್ದರೂ ಬ್ಯಾಟಿಂಗ್ ಮಾಡಿದ್ದರು. ರೋಹಿತ್ ಶರ್ಮಾ ಕೈ ಬೆರಳು ಗಾಯವಾಗಿದ್ದರೂ ಬ್ಯಾಟಿಂಗ್ ಮಾಡಿದ್ದರು.
ಇಂತಹವರ ಮಧ್ಯೆ ಗಿಲ್ ಕೇವಲ ಕುತ್ತಿಗೆ ನೋವು ನೆಪ ಹೇಳಿ ಬ್ಯಾಟಿಂಗ್ ಮಾಡಲಿಲ್ಲ. ಕುತ್ತಿಗೆ ನೋವು ಎಂದು ಅರ್ಧಕ್ಕೇ ಮೈದಾನ ತೊರೆದ ಮೊದಲ ಆಟಗಾರ ಇವರೇ ಇರಬೇಕು. ಇದು ಇಷ್ಟೊಂದು ಸೀರಿಯಸ್ ವಿಷಯನಾ? ಇದೆಲ್ಲಾ ಗಿಲ್ ಮಾಡಿರೋ ಡೌವ್ವು. ಅವರಿಗೆ ಮೊದಲ ಎಸೆತ ಎದುರಿಸಿದಾಗಲೇ ಈ ಪಿಚ್ ನಲ್ಲಿ ಕಷ್ಟ ಎನಿಸಿರಬೇಕು. ಅದಕ್ಕೇ ನೆಪ ಹೇಳಿ ಜವಾಬ್ಧಾರಿಯಿಂದ ಜಾರಿಕೊಂಡಿದ್ದಾರೆ. ಇಂತಹವರು ಮೂರೂ ಮಾದರಿಯಲ್ಲಿ ತಂಡದ ಕ್ಯಾಪ್ಟನ್ ಆಗಬೇಕಾ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.