ಕೋಲ್ಕತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಅವಮಾನಕರ ಪದ ಬಳಸಿದ್ದಾರೆ ಎನ್ನಲಾದ ವಿಡಿಯೋ ಒಂದು ಈಗ ವೈರಲ್ ಆಗಿದೆ.
ಮೊದಲ ಇನಿಂಗ್ಸ್ ನಲ್ಲಿ ಟೆಂಬಾ ಬವುಮಾ ಬ್ಯಾಟಿಂಗ್ ಮಾಡುತ್ತಿದ್ದರು. ಬುಮ್ರಾ ಬೌಲಿಂಗ್ ನಲ್ಲಿ ಚೆಂಡು ಅವರ ಪ್ಯಾಡ್ ಗೆ ತಗುಲಿತು. ಬುಮ್ರಾ, ರಿಷಭ್ ಪಂತ್ ಎಲ್ ಬಿಡಬ್ಲ್ಯುಗೆ ಮನವಿ ಮಾಡಿದರು. ಆದರೆ ಅಂಪಾಯರ್ ಇದನ್ನು ಪುರಸ್ಕರಿಸಲಿಲ್ಲ.
ಈ ವೇಳೆ ಬುಮ್ರಾ, ರಿಷಭ್ ಪಂತ್ ಹಾಗೂ ತಂಡದ ಇತರೆ ಆಟಗಾರರ ನಡುವೆ ಡಿಆರ್ ಎಸ್ ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗುತ್ತಿತ್ತು. ಆಗ ಮೈದಾನದಲ್ಲಿ ಗಿಲ್ ಇರಲಿಲ್ಲ. ಪಂತ್ ನಾಯಕನ ಜವಾಬ್ಧಾರಿ ಹೊತ್ತಿದ್ದರು. ಹೀಗಾಗಿ ಬುಮ್ರಾ-ಪಂತ್ ನಡುವೆ ಚರ್ಚೆ ನಡೆಯಿತು.
ಪಂತ್ ರಿವ್ಯೂ ಬೇಡ ಎಂದರೆ ಬುಮ್ರಾ ಅವರು ಡ್ವಾರ್ಫ್ ಎಂದು ಬವುಮಾಗೆ ಹೇಳಿದರು. ಡ್ವಾರ್ಫ್ ಎಂದರೆ ಕುಬ್ಜ ಎಂದರ್ಥ. ನೇರವಾಗಿ ಈ ಮಾತನ್ನು ಬವುಮಾಗೆ ಬುಮ್ರಾ ಬಳಸಲಿಲ್ಲ. ಆದರೆ ಅವರನ್ನು ಉದ್ದೇಶಿಸಿ ಪಂತ್ ಬಳಿ ಈ ಅವಮಾನಕರ ಪದ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ.