Astrology Yearly Horoscope

Select Your Language

Notifications

webdunia
webdunia
webdunia
webdunia

ಜಾತಕ


ಮೇಷ
ಅ, ಆ, ಚು, ಚೆ, ಚೋ, ಲ, ಲಿ, ಲು, ಲೆ, ಲೋ
ಮೇಷರಾಶಿ:-ಈ ವರ್ಷ ದೈವಬಲ ಕಡಿಮೆ. ವರ್ಷದ ಬಹುಪಾಲು ಗುರುವು ಸುಖಸ್ಥಾನದಲ್ಲಿ ಪ್ರತಿಕೂಲನು, ಶನಿಯು ವರ್ಷಪೂರ್ತಿ ವ್ಯಯಸ್ಥಾನದಲ್ಲಿ ಸಂಚರಿಸುತ್ತಾ ನಷ್ಟ ಕಷ್ಟ, ದುರ್ವ್ಯವಹಾರಗಳು, ಅಪಘಾತಭಯ ಇತ್ಯಾದಿಗಳಿಗೆ ಕಾರಣನೆನಿಸುವನು. ಈ ಕಾಲದಲ್ಲಿ ಸ್ಥಾನಮಾನಗಳಿಗೆ ಅನುಕೂಲವಲ್ಲ. ಕೌಟುಂಬಿಕ ಜೀವನದಲ್ಲಿ ಸುಖವು ಕಡಿಮೆ. ಮನಸ್ಸಿನ ನಮ್ಮದಿ ಕೆಡುವುದು..... ಹೆಚ್ಚು

ವೃಷಭ
ಈ, ಊ, ಎ, ಒ, ವಾ, ವೀ, ವೂ, ವೊ
ವೃಷಭರಾಶಿ:- ಗುರುವು ಜನ್ಮರಾಶಿಯಿಂದ ತೃತೀಯ-ಚತುರ್ಥದಲ್ಲಿ ಸಂಚರಿಸುವನಾಗಿ ದೈವಬಲ ಕಡಿಮೆ. ರಾಹುವೂ ಪ್ರತಿಕೂಲನು, ಸುಖ-ಸಂತೋಷಗಳು ಮರೀಚಿಕೆಯಾದಾವು. ವೃತಿ-ಉದ್ಯೋಗಗಳಲ್ಲಿ ಸ್ಪರ್ಧೆ-ಬದಲಾವಣೆ, ಆರ್ಥಿಕ ಅಡಚಣೆಗಳು, ವಾಸಸ್ಥಳ ಬದಲಾವಣೆ, ಬಂಧುಜನರಿಂದ/ಸಹೋದ್ಯೋಗೊಗಳಿಂದ ಕ್ಷೇಶಗಳು, ಪ್ರೀತಿಪಾತ್ರರು ಅಥವಾ ಸಮೀಪದ ಬಂಧುವೊಬ್ಬರು ತೊಂದರೆಗೆ ಸಿಲುಕುವರು. ಕಾರ್ಯನಿಮಿತ್ತ ಸಂಚಾರ, ಕುಟುಂಬದಲ್ಲಿ ದುಃಖಕರ ಪ್ರಸಂಗಗಳು, ಆರೋಗ್ಯಕ್ಕೂ.... ಹೆಚ್ಚು

ಮಿಥುನ
ಕಾ, ಕೀ, ಕೂ, ಘ, ಡ, ಛ, ಕೆ, ಹ
ಮಿಥುನರಾಶಿ:-ಈ ವರ್ಷ ದ್ವಿತೀಯದ ಗುರುವು ಉತ್ತಮ ದೈವಬಲವೊದಗಿಸುವನು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲ ಉಂಟಾಗುವುದು, ಸಾರ್ವಜನಿಕ ಸೇವಾಕಾರ್ಯಗಳಿಗೆ ಪ್ರಶಂಸೆ ಗಳಿಸುವಿರಿ. ಮಕ್ಕಳಿಗೂ ಅನುಕೂಲವುಂಟಾಗುವುದು, ವಿವಿಧಮೂಲಗಳಿಂದ ಧನಲಾಭ, ಸಾಂಸಾರಿಕ ಸುಖಸಂತೋಷಗಳು, ಪತಿಪತ್ನಿಯರಲ್ಲಿ ಹೆಚ್ಚಿನ ಅನ್ನೋನ್ಯತೆ. ವಾಕ್ಸಿದ್ವಿ, ಮನೆಯಲ್ಲಿ ಶುಭಶೋಭನಾದಿ ಮಂಗಲಕಾರ್ಯಗಳು ನಡೆಯುವವು. “ವರ್ಷಪೂರ್ತಿ.... ಹೆಚ್ಚು

ಕರ್ಕಾಟಕ
ಹೀ, ಹು, ಹೇ, ಹೋ, ದಾ, ಡೀ, ಡು, ದೇ, ಮಾಡು
ಕರ್ಕಟರಾಶಿ:-ಗುರುವು ಜನ್ಮ-ದ್ವಿತೀಯಗಳಲ್ಲೂ ಶನಿಯು ನವಮದಲ್ಲೂ, ರಾಹುವು ಸಪ್ತಮಾಷ್ಟಮಗಳಲ್ಲೂ ಸಂಚರಿಸುವರಾಗಿ ಗುಣದೋಷಗಳಿಂದ ಕೂಡಿದ ಮಿಶ್ರಫಲಗಳನ್ನನುಭವಿಸುವಿರಿ. 'ಸ್ಥಾನಭ್ರಂಶಧನಕ್ಷಯೌಕಲಹಧೀಜಾಡ್ಯಗುರೌಜನ್ಮಗೇ' ಎಂಬಂತೆ ಧನವ್ಯಯ ಉಂಟಾಗಬಹುದು. ಸ್ಥಾನಮಾನಗಳಿಗೆ ಹಾನಿ, ಬುದ್ದಿಯ ಅಸ್ಥಿರತೆ, ಕಲಹ ಇತ್ಯಾದಿಗಳೊಂದಿಗೆ ಪರಸ್ಥಳ ಸಂಚಾರಾದಿ ಫಲಗಳೂ ಉಂಟಾಗುವುದು. ನವಮದ ಶನಿಯಿಂದ ಮನೆಸ್ಸಿಗೆ ನೆಮ್ಮದಿ ಕಡಿಮೆಯಾಗುವುದು. ಮಾನಸಿಕ ಅಶಾಂತಿ,.... ಹೆಚ್ಚು

ಸಿಂಹ
ಮ, ಮಿ, ಮೂ, ಮಿ, ಮೋ, ತಾ, ತಿ, ಟು, ತೆ
ಸಿಂಹರಾಶಿ:- ವ್ಯಯಸ್ಥಾನ-ಜನ್ಮರಾಶಿಗಳ ಗುರು ಮತ್ತು ಅಷ್ಟಮದ ಶನಿಯಿಂದಾಗಿ ಈ ವರ್ಷ ದೈವಬಲವಿಲ್ಲ. ಕುಟುಂಬದಲ್ಲಿ ದುಃಖಕರ ಪ್ರಸಂಗಗಳನ್ನು ಎದುರಿಸಬೇಕಾಗುವುದು. ಸ್ವಲ್ಪ ಮಟ್ಟಿನ ಮನಸ್ತಾಪಗಳೂ ತೋರುವುದು. ಆರೋಗ್ಯಕ್ಕೂ ಉತ್ತಮವಲ್ಲ. ವಾಹನಾದಿಗಳಿಂದ ತೊಂದರೆಗಳುಂಟಾಗುವ ಸಂದರ್ಭವಿರುವುದರಿಂದ ಜಾಗ್ರತೆ ವಹಿಸಬೇಕು. ಕೃಷಿಕಾರ್ಯಗಳಲ್ಲಿ ಸ ನಷವನ್ನು ವಿಘ್ನಗಳನ್ನೂ ನೀವು ಅನುಭವಿಸುವಿರಿ. ನಿಮ್ಮಿಂದ.... ಹೆಚ್ಚು

ಕನ್ಯಾ
ಧೋ, ಪ, ಪೈ, ಪೂ, ಶ, ನ, ತಾ, ಪೆ, ಪೋ
ಕನ್ಯಾರಾಶಿ:-ಲಾಭಸ್ಥಾನದ ಗುರುವು ದೈವಬಲವೊದಗಿಸುವನು. ರಾಹುಕೇತುಗಳೂ ಅನುಕೂಲರು. ಎಲ್ಲ ರೀತಿಯಲ್ಲಿ ಅನುಕೂಲಗಳು ಉಂಟಾಗುವುದು. ಗ್ರಹಿಸಿದ ಕೆಲವು ಕಾರ್ಯಗಳನ್ನು ಪ್ರಯತ್ನಿಸಿದಲ್ಲಿ ಸಿದ್ದಿಸುವುದು. ಕುಟುಂಬದಲ್ಲಿ ಹೊಸಬರ ಆಗಮನದ ಸಾಧ್ಯತೆಯಿದೆ. ಆರ್ಥಿಕವಾಗಿಯೂ ಅಭಿವೃದ್ಧಿಯು ಉಂಟಾಗುವುದು. ಉನ್ನತ ಸ್ಥಾನಮಾನಗಳು ಸಿಗುವ ಸಾಧ್ಯತೆಯಿದೆ. ಗೃಹದಲ್ಲಿ ಶುಭಸಮಾರಂಭಗಳು ನಡೆಯುವುದು. ವಿವಿಧಮೂಲಗಳಿಂದ ಧನಪ್ರಾಪ್ತಿಯಿದೆ..... ಹೆಚ್ಚು

ತುಲಾ
ರ, ರಿ, ರು, ರೆ, ರೋ, ತಾ, ತಿ, ತೂ, ತೆ
ತುಲಾರಾಶಿ:- ಈ ವರ್ಷ ದೈವಬಲ ಕಡಿಮೆ. ಜನ್ಮರಾಶಿಯಿಂದ ದಶಮದ ಗುರು, ಚತುರ್ಥ-ಪಂಚಮಗಳ ರಾಹು. ಆರ್ಥಿಕವಾಗಿಯೂ ವ್ಯಾವಹಾರಿಕವಾಗಿಯೂ ಕಷ್ಟನಷ್ಟಗಳು ಅಧಿಕ. ಸ್ಥಾನಮಾನಾದಿ ಹಾನಿ, ಧನಹಾನಿ, ಅಶುಭಗಳ ಅನುಭವ, ಸಂತಾನ ಸಂಬಂಧ ದುಃಖ, ಮಾತಿನಲ್ಲಿ ಹಾಗೂ ಚಟುವಟಿಕೆಯಲ್ಲಿ ವ್ಯತ್ಯಾಸಗಳು ತೋರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಯತ್ನ.... ಹೆಚ್ಚು

ವೃಶ್ಚಿಕ
ಗೆ, ನಾ, ನಿ, ನು, ನೆ, ನೋ, ಯಾ, ಯಿ, ಯು
ವೃಶ್ಚಿಕರಾಶಿ:- ಭಾಗ್ಯಸ್ಥಾನದ ಗುರುವಿನಿಂದ ದೈವಬಲವಿದ್ದು ಮನೋನಿಶ್ಚಿತ ಕೆಲಸಗಳು ನಿರ್ವಿಘ್ನವಾಗಿ ನಡೆಯುವುದು. ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲಗಳು ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ. ಮನೆಯಲ್ಲಿ ಶಾಂತಿ, ಸುಖಸಂತೋಷ ಲಭಿಸುವುದು. ಉಳಿದಂತೆ ಪಂಚಮಸ್ಥಾನದ ಶನಿ, ಅನಿಷ್ಟಸ್ಥಾನಸ್ಥಿತ ರಾಹುಕೇತುಗಳು, ವರ್ಷದ.... ಹೆಚ್ಚು

ಧನು
ಯೇ, ಯೋ, ಭಾ, ಭೀ, ಭೂ, ಧಾ, ಫ, ಧಾ, ಭೇ
ಧನುರಾಶಿ:-ಗುರುವು ಈ ಸಮಯದಲ್ಲಿ ನಿಮ್ಮ ಜನ್ಮಾಷ್ಟಮ ರಾಶಿಯಲ್ಲಿ ಸಂಚರಿಸುತ್ತಿರುವನು. ಈ ಕಾಲದಲ್ಲಿ ದೈವಬಲವಿರದು. ಚತುರ್ಥದ ಶನಿಯೂ 9-8 ರ ಕೇತುವೂ ಅಶುಭಫಲೆದಾಯಕರು. ಆರೋಗ್ಯದಲ್ಲಿ ತೊಂದರೆಗಳು ತೋರುವುದು. ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವ್ವಹಾರಗಳಲ್ಲಿ ಸೋಲುಂಟಾಗಬಹುದು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ತೋರಬಹುದು. ಆರ್ಥಿಕವಾಗಿ ಖರ್ಚು.... ಹೆಚ್ಚು

ಮಕರ
ಭೋ, ಜಾ, ಜಿ, ಖಿ, ಖೂ, ಖೇ, ಖೋ, ಗ, ಗೀ
ಮಕರರಾಶಿ:- ಗುರುವು ಸಪ್ತಮದಲ್ಲಿದ್ದು ಉತ್ತಮ ದೈವಬಲವಿದೆ. ಶನಿಯೂ ವರ್ಷವಿಡೀ ತೃತೀಯಸ್ಥಾನದಲ್ಲಿ ಸಂಚರಿಸುತ್ತಾ ಕೆಲವೊಂದು ಅನುಕೂಲಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಿವಾಹ ಶುಭಶೋಭನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮ ಕಾಲವಾಗಿರುತ್ತದೆ. ಭೂಮಿ, ವಾಹನಾದಿ ಸುಖಗಳು ಉಂಟಾಗುವುದು. ಪತ್ನಿಗೂ ಅನುಕೂಲ ಕಾಲವಾಗಿರುತ್ತದೆ. ದಾಂಪತ್ಯದಲ್ಲಿ ಸುಖಸಂತೋಷಗಳು,.... ಹೆಚ್ಚು

ಕುಂಭ
ಗು, ಗೆ, ಗೋ, ಸ, ಸಿ, ಸು, ಸೆ, ಸೋ, ಡಾ
ಕುಂಭರಾಶಿ:- ದ್ವಿತೀಯಸ್ಥಾನದ ಶನಿ, ಜನ್ಮ-ವ್ಯಯಸ್ಥಾನದ ರಾಹು, ಸಪ್ತಮದ ಕೇತು, ಶತ್ರುಸ್ಥಾನದ ಗುರು-ದೈವಕೃಪೆಯ ಅಭಾವ ತೋರುವುದು. ಮಾನಸಿಕ ಖಿನ್ನತೆಯಿಂದ ಬಳಲುವಿರಿ. ಸಾಮಾಜೆಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಇಷ್ಟಪಡುವಿರಿ. ಆರೋಗ್ಯದ ವಿಚಾರವಾಗಿ ಜಾಗ್ರತೆ ವಹಿಸಬೇಕು. ಕೆಲವು ವಿಚಾರಗಳಲ್ಲಿ ಅನ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸ್ತ್ರೀಸುಖಗೃಹಸುಖಾದಿ ಹಾನಿ, ಮಾನಸಿಕ.... ಹೆಚ್ಚು

ಮೀನ
ಡಿ, ಡು, ಠ್, ಝಾ, ಎನ್, ದೇ, ಡೊ, ಚಾ, ಚಿ
ಮೀನರಾಶಿ:- ಗುರುವು ಈ ವರ್ಷ ಪಂಚಮದಲ್ಲಿ ಸಂಚರಿಸುತ್ತಿರುವುದರಿಂದ ದೈವಬಲವಿದೆ. ಗೃಹದಲ್ಲಿ ಶುಭಕಾರ್ಯಗಳು ನಡೆಯುವುದು. ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯಿದೆ.ನೂತನ ವೃತ್ತಿ ಕೈಗೊಳ್ಳಬಹುದು. ಹೊಸ ಮನೆ ಅಥವಾ ಹೊಸ ಪರಿಸರಕ್ಕೆ ಹೋಗಬೇಕಾಗಬಹುದು. ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಮಕ್ಕಳ ಕಾರಣ ಸಂತೋಷದಾಯಕ ವಾರ್ತೆ ಬರುವುದು..... ಹೆಚ್ಚು