ಕನ್ಯಾ
ಕನ್ಯಾ: ಉತ್ತರ 2, 3, 4 ಪಾದಗಳು, ಹಸ್ತ, ಚಿತ್ತ 1, 2 ಪಾದಗಳು
ಈ ರಾಶಿಯವರಿಗೆ ಗುರುವಿನ ಪ್ರಭಾವದಿಂದ ಧನ ನಷ್ಟವಾಗುವ ಸಾಧ್ಯತೆ. ವರ್ಷಾರಂಭದಲ್ಲಿ ಹಣಕಾಸಿನ ಮುಗ್ಗಟ್ಟು ಕಂಡುಬಂದರೂ ಮಾರ್ಚ್ ಬಳಿಕ ಚೇತರಿಕೆ ಕಂಡುಬರಲಿದೆ. ರಾಹು ಮತ್ತು ಕೇತುವಿನ ಪ್ರಭಾವದಿಂದ ತೊಂದರೆಗಳು ಎದುರಾದೀತು. ಜೂನ್ ಬಳಿಕ ಪತ್ನಿಯಿಂದ ಸುಖ, ನೆಮ್ಮದಿ ಸಿಗುವುದು. ಮನಸ್ತಾಪಗಳು ಮರೆಯಾಗಲಿವೆ. ಆದರೆ ಆಗಾಗ ಜ್ವರದಂತಹ ಸಾಮಾನ್ಯ ಖಾಯಿಲೆಗಳು ಬರುತ್ತಲೇ ಇರುತ್ತವೆ. ಸೆಪ್ಟೆಂಬರ್ ಬಳಿಕ ಆರ್ಥಿಕವಾಗಿ ಸಬಲರಾಗುವಿರಿ. ಸಾಮಾಜಿಕ ಕೆಲಸಗಳನ್ನು ಮಾಡುವ ಮನಸ್ಸಾಗಲಿದೆ. ಅಪಮಾನ ಭೀತಿಯಿದ್ದು ಶರೀರ ಕ್ಷೀಣವಾಗುವ ಆತಂಕವಿರಲಿದೆ. ನವಂಬರ್ ಬಳಿಕ ಕಾನೂನು, ಕಚೇರಿ ವ್ಯಾಜ್ಯಗಳಲ್ಲಿ ಜಯ ಗಳಿಸಲಿದ್ದೀರಿ. ವರ್ಷಾಂತ್ಯದಲ್ಲಿ ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಿ ಬರಲಿದೆ. ಸಂಕಷ್ಟಗಳ ಪರಿಹಾರಕ್ಕಾಗಿ ಪ್ರತಿನಿತ್ಯ ಮಹಾವಿಷ್ಣುವಿನ ಪ್ರಾರ್ಥನೆ ಮಾಡುವುದು ಉತ್ತಮ.