Astrology Yearly Horoscope Details

Select Your Language

Notifications

webdunia
webdunia
webdunia
webdunia

ಜಾತಕ

ವೃಷಭ
ವೃಷಭರಾಶಿ:- ಗುರುವು ಜನ್ಮರಾಶಿಯಿಂದ ತೃತೀಯ-ಚತುರ್ಥದಲ್ಲಿ ಸಂಚರಿಸುವನಾಗಿ ದೈವಬಲ ಕಡಿಮೆ. ರಾಹುವೂ ಪ್ರತಿಕೂಲನು, ಸುಖ-ಸಂತೋಷಗಳು ಮರೀಚಿಕೆಯಾದಾವು. ವೃತಿ-ಉದ್ಯೋಗಗಳಲ್ಲಿ ಸ್ಪರ್ಧೆ-ಬದಲಾವಣೆ, ಆರ್ಥಿಕ ಅಡಚಣೆಗಳು, ವಾಸಸ್ಥಳ ಬದಲಾವಣೆ, ಬಂಧುಜನರಿಂದ/ಸಹೋದ್ಯೋಗೊಗಳಿಂದ ಕ್ಷೇಶಗಳು, ಪ್ರೀತಿಪಾತ್ರರು ಅಥವಾ ಸಮೀಪದ ಬಂಧುವೊಬ್ಬರು ತೊಂದರೆಗೆ ಸಿಲುಕುವರು. ಕಾರ್ಯನಿಮಿತ್ತ ಸಂಚಾರ, ಕುಟುಂಬದಲ್ಲಿ ದುಃಖಕರ ಪ್ರಸಂಗಗಳು, ಆರೋಗ್ಯಕ್ಕೂ ಉತ್ತಮವಲ್ಲ. ವಾಹನಗಳಿಂದ ತೊಂದರೆಗಳುಂಟಾಗುವ ಸಂಭವ. ಶನಿಯು ಲಾಭಸ್ಥಾನದಲ್ಲಿ ಅನುಕೂಲನು. ಕೃಷಿಕಾರ್ಯಗಳಲ್ಲಿ ಅಭಿವೃದ್ಧಿಯಿದೆ. ಗ್ರಹಿಸಿದ ಕಾರ್ಯಗಳು ಅನಿರೀಕ್ಷಿತವಾಗಿ ಒದಗಿಬರುವುದು. ಉದ್ಯೋಗ ವ್ಯವಹಾರದ ಬಗ್ಗೆಯೂ ಕಾರ್ಯಾನುಕೂಲವಿದೆ. ಹಿರಿಯ ಸಹೋದರ ಸಮಾನ ವ್ಯಕ್ತಿಯಿಂದ ಹಾಗೂ ಬಂಧುಗಳಿಂದ ವಿಶೇಷ ಸಹಕಾರ, ಪ್ರಯೋಜನವನ್ನು ಹೊಂದುವಿರಿ. ವರ್ಷದ ಉತ್ತರಾರ್ಧದಲ್ಲಿ ನವಮದ ರಾಹುವು ಕೆಲವೊಂದು ದರ್ಮಸಮ್ಮತವಲ್ಲದ ಕಾರ್ಯಗಳಿಗೆ ಪ್ರಚೋದಿಸುವನು. ಗುರು-ರಾಹು-ಕೇತುಗಳ ಪ್ರೀತ್ಯರ್ಥ ಯಥಾಶಕ್ತಿ ವಿಷ್ಣು-ಸುಬ್ರಹ್ಮಣ್ಯ-ಗಣಪತಿ ದೇವತಾರಾಧನೆ ನಡೆಸುವುದರಿಂದ ಶುಭ. ಕೆಲಸಕಾರ್ಯಗಳು ನಿಮ್ಮ ಯೋಜನೆಯಂತೆ ನಡೆಯುವವು. ಆರ್ಥಿಕವಾಗಿ ಲಾಭವಿದೆ. ಅಧಿಕಾರಿವರ್ಗದವರಿಂದ ಪ್ರಯೋಜನವನ್ನು ಪಡೆಯುವಿರಿ. ಸಾಂಸಾರಿಕವಾಗಿ ತೃಪ್ತಿಯಿದೆ. ಮುಂದೆ ಜುಲಾಯಿ 16 ರವರೆಗೆ ಪ್ರತಿಕೂಲಫಲಗಳು ಅಧಿಕ. ಬೆಂಕಿ ಮತ್ತು ವಿದ್ಯುತ್ತುಗಳಲ್ಲಿ ವಿಶೇಷ ಜಾಗ್ರತೆ ವಹಿಸಿ. ಉದ್ಯೋಗ-ಗೃಹಕೃತ್ಯಗಳಲ್ಲಿ ತೊಂದರೆ, ಧನಹಾನಿ, ದೈಹಿಕ ಆಘಾತ ಉಂಟಾಗಬಹುದು. ಮುಂದೆ ಅಗೋಸ್ತು 13ರವರೆಗೆ ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ಕಲಹ-ಶತ್ರುಕೃತ ದೋಷದಿಂದ ರಾಜೋಪದ್ರವ ಎದುರಾದೀತು. ಮಕ್ಕಳವಿಷಯದಲ್ಲಿ ಎಚ್ಚರಿಕೆಯಿರಲಿ. ಮನೆ ಮತ್ತು ವೃತ್ತಿಯಲ್ಲಿ ಕೆಲವೊಂದು ಸುಖ-ಸೌಕರ್ಯಗಳು ಪ್ರಾಪ್ತವಾಗುವವು. ಆರೋಗ್ಯ ಸುಧಾರಿಸುವುದು. ಮುಂದೆ ಒಕ್ಟೋಬರ 27 ರ ವರೆಗೆ ಗೃಹ-ವಾಹನಾದಿ ಸುಖಗಳಲ್ಲಿ ಕೊರತೆ, ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸೀತು. ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು ಎದುರಾದೀತು. ಮುಂದೆ ನವಂಬರ 6 ರ ವರೆಗೆ ಆರೋಗ್ಯದಲ್ಲಿ ಸುಧಾರಣೆ. ಶತ್ರುನಾಶ, ಗೃಹಸೌಕರ್ಯವೃದ್ಧಿ, ಬಂಧುಸಹಕಾರ ಸಿಗುವುದು. ಆತ್ಮಸ್ಥೆರ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು. ಮಾರ್ಗ ಸಂಚಾರ, ಉದರಸಂಬಂಧ ಹಾಗೂ ಉಸಿರಾಟದ ತೊಂದರೆಗಳು, ಕೌಟುಂಬಿಕ ಕಿರಿಕಿರಿ, ಕಲಹ, ಆರ್ಥಿಕವಾಗಿ ಕಷ್ಟ-ನಷ್ಟಗಳು, ಕಾರ್ಯವಿಘ್ನ, ಶ್ರಮ ಇತ್ಯಾದಿಗಳಿದ್ದರೂ ವಿವಿಧ ಮೂಲಗಳಿಂದ ಧನಪ್ರಾಪ್ತಿಯಿದೆ. ಈ ಮಧ್ಯೆ ಕಾರ್ಯಗಳಿಗೆ ಇತರರಿಂದ ಕೆಲವೊಂದು ಅಡ್ಡಿಗಳು ಉಂಟಾಗುವುದು. ಮನಸ್ಸಿನ ನೆಮ್ಮದಿ ಕಡಿಮೆಯಾಗುವುದು. ಮಕ್ಕಳ ವಿಚಾರವಾಗಿ ಮನಸ್ಸಿಗೆ ಸಮಾಧಾನ ಕಡಿಮೆಯಾಗಬಹುದು. ಮುಂದೆ ವರ್ಷಾಂತ್ಯದ ವರೆಗೂ ಸಕಲ ಕಾರ್ಯಸಿದ್ದಿ, ಸ್ಥಾನಮಾನಾದ್ಯುತ್ಕರ್ಷೆ, ಜನಪ್ರಿಯತೆ, ಜನನಾಯಕತ್ವ, ಭೂಧನಾದಿ ಲಾಭ, ಆರೋಗ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು.