ಕರ್ಕಾಟಕ
ಕರ್ಕಾಟಕ ರಾಶಿ : ಪುನರ್ವಸು 4ನೇ ಪಾದ, ಪುಷ್ಯ, ಆಶ್ಲೇಷ
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಹಣಕಾಸಿನ ವಿಚಾರದಲ್ಲಿ ಕಷ್ಟ-ನಷ್ಟಗಳು ಉಂಟಾದೀತು. ಆದರೆ ಮೇ ಬಳಿಕ ಕೊಂಚ ಸುಧಾರಣೆ ಕಂಡುಬರಲಿದೆ. ಶನಿಯ ಪ್ರಭಾವದಿಂದ ಆರೋಗ್ಯದಲ್ಲಿ ತೊಂದರೆಗಳು ಎದುರಾದೀತು. ಬಳಿಕ ಧನಲಾಭವಾದರೂ ಮಾನಹಾನಿಯಾಗುವ ಸಂಭವವಿದೆ. ಆಗಸ್ಟ್ ಬಳಿಕ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಉದ್ಯೋಗಿಗಳಿಗೆ ಉತ್ತಮ ಪದವಿಗೇರುವ ಅವಕಾಶವಿದೆ. ನಿಮ್ಮ ಕಾರ್ಯರಂಗದಲ್ಲಿ ನಾಯಕನಾಗುವ ಅವಕಾಶಗಳು ನಿಮ್ಮದಾಗಲಿದೆ. ಅವಿವಾಹಿತ ಮಹಿಳೆಯರಿಗೆ ಈ ವರ್ಷ ವಿವಾಹ ಯೋಗವಿದೆ. ವರ್ಷಾಂತ್ಯದಲ್ಲಿ ಕುಟುಂಬದ ಹೊಣೆ ಹೊರಬೇಕಾದ ಅನಿವಾರ್ಯತೆ ಎದುರಾಗುವುದು. ಹಿರಿಯರಿಂದ ಕೆಲವೊಂದು ಬಳುವಳಿಗಳನ್ನು ಪಡೆಯುವ ಅವಕಾಶ. ವರ್ಷಾಂತ್ಯದಲ್ಲಿ ಮಕ್ಕಳಿಂದ ಸಂತೋಷ ಅನುಭವಿಸುವ ಯೋಗ ನಿಮ್ಮದಾಗಲಿದೆ. ಹೊಸ ಮನೆ ಕಟ್ಟುವ ಯೋಗವೂ ಇದೆ. ಕಷ್ಟಗಳ ಪರಿಹಾರಕ್ಕಾಗಿ ದುರ್ಗಾದೇವಿಯ ಪ್ರಾರ್ಥನೆ ಮಾಡುವುದು ಉತ್ತಮ.