Select Your Language

Notifications

webdunia
webdunia
webdunia
webdunia

ಜಾತಕ

ಮಕರ
ಮಕರ: ಉತ್ತರಾಷಾಢ 2, 3, 4 ಪಾದಗಳು, ಶ್ರವಣ, ಧನಿಷ್ಟ, 1, 2 ಪಾದಗಳು. ಈ ರಾಶಿಯವರಿಗೆ ಈ ವರ್ಷದ ಆರಂಭದಲ್ಲಿ ಶನಿಯ ಪ್ರಭಾವದಿಂದ ದೇಹಾಯಾಸ, ನೋವು ತೊಂದರೆಗಳು ಕಂಡುಬಂದೀತು. ಆದರೆ ಬಳಿಕ ಆದಾಯದಲ್ಲಿ ವೃದ್ಧಿಯಾಗುವುದು, ವ್ಯಾಪಾರ, ವ್ಯವಹಾರಗಳು ಯಶಸ್ವಿಯಾಗಲಿದೆ. ಜೂನ್ ಬಳಿಕ ಹಿರಿಯರ ಕೋಪಕ್ಕೆ ಗುರಿಯಾಗುವ ಸಾಧ್ಯತೆ. ಆಗಸ್ಟ್ ನಲ್ಲಿ ಉದ್ಯೋಗ ನಿಮಿತ್ತ ಅನ್ಯ ಊರಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದೀತು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳಿದ್ದರೂ ಬಳಸಿಕೊಳ್ಳುವಲ್ಲಿ ಎಡವಲಿದ್ದೀರಿ. ಅಕ್ಟೋಬರ್ ಬಳಿಕ ಧನಾದಾಯದಲ್ಲಿ ಕೊಂಚ ಏರಿಳಿತಗಳು ಕಂಡುಬರಲಿದೆ. ವಾಹನ ಸಂಚಾರ ಮಾಡುವಾಗ ತೊಂದರೆಗಳಾಗುವ ಸಾಧ್ಯತೆ. ಎಚ್ಚರಿಕೆ ಅಗತ್ಯ. ಮಕ್ಕಳಿಂದ ಸಹಾಯ ಸಿಗಲಿದೆ. ನವಂಬರ್ ಬಳಿಕ ಆದಾಯದಲ್ಲಿ ವೃದ್ಧಿಯಿದ್ದರೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣವಾದೀತು. ವರ್ಷಾಂತ್ಯದಲ್ಲಿ ಶತ್ರುಗಳ ಪೀಡೆ ಕಂಡುಬಂದೀತು. ಯಾವುದೇ ವಿಚಾರದ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಮುಖ್ಯ. ಈ ರಾಶಿಯವರು ಮಹಾವಿಷ್ಣುವಿನ ಸೇವೆ ಮಾಡುತ್ತಾ ಬಂದರೆ ಉತ್ತಮ.