ಮೇಷ
ಮೇಷ: ಅಶ್ವನಿ, ಭರಣಿ 1ನೇ, 2ನೇ, 3ನೇ, 4ನೇ ಪಾದಗಳು, ಕೃತ್ತಿಕಾ 1ನೇ ಪಾದಗಳು
ಮೇಷ ರಾಶಿಯವರಿಗೆ ಈ ವರ್ಷ ಆರಂಭದಲ್ಲಿ ಖರ್ಚುಗಳು ಸಾಕಷ್ಟಿದ್ದರೂ ಅಷ್ಟೇ ಆದಾಯವೂ ಇರುತ್ತದೆ. ಕೊಂಚ ವಿಲಾಸೀ ಜೀವನದ ಕಡೆಗೆ ಮನಸ್ಸು ವಾಲುತ್ತದೆ. ಮೇ ತಿಂಗಳಿನಲ್ಲಿ ನೆರೆಹೊರೆಯವರಿಂದ ಕಿರಿ ಕಿರಿ ಇದ್ದೀತು. ಆದರೆ ದೈವಿಕ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲಿದ್ದೀರಿ. ಸಹ ವೃತ್ತಿಯ ಬಗ್ಗೆ ಯೋಚನೆ ಮಾಡುವುದು ಉತ್ತಮ. ಜೂನ್ ಬಳಿಕ ಕಾನೂನು, ಕಚೇರಿ ಅಲೆದಾಟಗಳು ಕಂಡುಬಂದೀತು. ಅಕ್ಟೋಬರ್ ಬಳಿಕ ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆ. ಆದರೆ ಸಂಗಾತಿಯಿಂದ ಯಥೇಚ್ಛ ಪ್ರೀತಿ, ಸಹಕಾರ ಸಿಗುವುದು. ಮಕ್ಕಳಿಂದ ಕೆಲವೊಂದು ಮನೋವ್ಯಾಕುಲತೆಗಳು ಕಂಡುಬಂದೀತು. ಹಿರಿಯರಿಗೆ ಮರಳಿ ಹೋಗಿದ್ದ ವಸ್ತುಗಳು, ವ್ಯಕ್ತಿಗಳನ್ನು ಮರಳಿ ಪಡೆದುಕೊಳ್ಳುವ ಸಂಭ್ರಮವಿರಲಿದೆ. ಡಿಸೆಂಬರ್ ನಲ್ಲಿ ಮಾಡದ ತಪ್ಪಿಗೆ ಅವಮಾನ, ಸ್ತೀಯರಿಂದ ವಿರೋಧ ಕಂಡುಬಂದೀತು. ಈ ವರ್ಷ ದೈಹಿಕವಾಗಿ ಆರೋಗ್ಯ ಸಮ ಸ್ಥಿತಿಯಲ್ಲಿರಲಿದೆ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಸಕಾರಾತ್ಮಕ ಫಲ ಸಿಗಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡುವುದು ಉತ್ತಮ.