ವೃಶ್ಚಿಕ
ವೃಶ್ಚಿಕ: ವಿಶಾಖ 4ನೇ ಪಾದ, ಅನುರಾಧ, ಜ್ಯೇಷ್ಟ 1, 2, 3, 4ನೇ ಪಾದ
ಈ ರಾಶಿಯವರಿಗೆ ವರ್ಷಾರಂಭದಲ್ಲಿ ವ್ಯವಹಾರದಲ್ಲಿ ಲಾಭದ ಕೊರತೆ, ಸಮೀಪವರ್ತಿಗಳಿಂದಲೇ ತೊಂದರೆಗಳು ಎದುರಾದೀತು. ಜನವರಿ ಅಂತ್ಯದ ಬಳಿಕ ರಾಜಯೋಗವಿದ್ದು, ಸಾಮಾಜಿಕವಾಗಿ ಪ್ರತಿಷ್ಠೆ, ಗೌರವ ಪಡೆಯಲಿದ್ದೀರಿ. ಫೆಬ್ರವರಿ ಬಳಿಕ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ಉಳಿತಾಯದ ದಾರಿಗಳ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ಜೂನ್ ಬಳಿಕ ಮಕ್ಕಳ ಆರೋಗ್ಯ ಪದೇ ಪದೇ ಕೈಕೊಟ್ಟು ಚಿಂತೆಗೆ ಕಾರಣವಾಗಲಿದೆ. ಸ್ತ್ರೀಯರಿಂದ ವಿರೋಧ ಎದುರಿಸಬೇಕಾಗುತ್ತದೆ. ಸೆಪ್ಟೆಂಬರ್ ಬಳಿಕ ವ್ಯಾಪಾರಿಗಳಿಗೆ ಧನಲಾಭದ ಯೋಗ. ಹೊಸ ಹೂಡಿಕೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಅವಿವಾಹಿತರಿಗೆ ಕಂಕಣ ಯೋಗವೂ ಕೂಡಿಬರುವುದು. ವರ್ಷಾಂತ್ಯದಲ್ಲಿ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದ್ದು, ಮಾನಸಿಕವಾಗಿ ನೆಮ್ಮದಿ ಅನುಭವಿಸಲಿದ್ದೀರಿ. ಸುಬ್ರಹ್ಮಣ್ಯ ದೇವರ ಆರಾಧನೆ, ಪೂಜೆ ಮಾಡುವುದರಿಂದ ಸಂಕಷ್ಟಗಳು ಪರಿಹಾರವಾಗಲಿದೆ.