Select Your Language

Notifications

webdunia
webdunia
webdunia
webdunia

ಜಾತಕ

ಮಿಥುನ
ಮಿಥುನ: ಮೃಗಶಿರ 3, 4 ಪಾದಗಳು, ಅರ್ಧ, ಪುನರ್ವಸು 1, 2, 3 ಪಾದಗಳು. ಈ ರಾಶಿಯವರಿಗೆ ವರ್ಷಾರಂಭದಲ್ಲಿ ಗುರುವು ಲಾಭದಾಯಕನಾಗಿದ್ದು ಸಕಲ ಸುಖಕ್ಕೆ ಕಾರಣನಾಗುವನು. ವ್ಯವಹಾರದಲ್ಲಿ ಧರ್ಮನಿಷ್ಠೆ ಪಾಲಿಸಲಿದ್ದೀರಿ. ಆದರೆ ಕೇತುವಿನಿಂದ ತೊಂದರೆಗಳು ಎದುರಾದೀತು. ಸಂವತ್ಸರದ ಆರಂಭದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ವಾರ್ತೆ ಕೇಳಿಬರಲಿದೆ. ಆರ್ಥಿಕವಾಗಿ ಲಾಭ ಹೊಂದುವಿರಿ. ಒಳ್ಳೆಯ ಕೆಲಸಕ್ಕೆ ಉತ್ತಮ ಫಲ ಇದ್ದೇ ಇರುತ್ತದೆ. ಹಿರಿಯರಿಗೆ ಪಿತ್ತ ಸಂಬಂಧೀ ರೋಗ ಬಾಧೆ ಕಂಡುಬಂದೀತು. ಆಗಸ್ಟ್ ಬಳಿಕ ನ್ಯಾಯಾಲಯ, ಕಚೇರಿ ವ್ಯಾಜ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಶತ್ರುಗಳು ನಾಶವಾಗಲಿದ್ದಾರೆ. ಸೆಪ್ಟೆಂಬರ್ ಬಳಿಕ ರಾಜಕೀಯ ರಂಗದಲ್ಲಿರುವವರಿಗೆ ಉನ್ನತಿಯ ಯೋಗ. ಅಕ್ಟೋಬರ್ ಬಳಿಕ ಕೊಂಚ ಚಿಂತೆ, ಮಾನಸಿಕವಾಗಿ ಅಧೈರ್ಯದ ಸಾಧ್ಯತೆ. ಮಹಿಳೆಯರಿಗೆ ಮಕ್ಕಳಿಂದ ಸುಖ. ವರ್ಷಾಂತ್ಯದಲ್ಲಿ ಕೆಲಸದ ಹೊರೆ ದೈಹಿಕವಾಗಿ ಆರೋಗ್ಯವನ್ನು ಏರುಪೇರು ಮಾಡಲಿದೆ. ಮಹಾವಿಷ್ಣುವಿನ ಪ್ರಾರ್ಥನೆ ಮಾಡಿದರೆ ಪರಿಹಾರ ಸಿಗುವುದು.