Select Your Language

Notifications

webdunia
webdunia
webdunia
webdunia

ಜಾತಕ

ಧನು
ಧನು: ಮೂಲ, ಪೂರ್ವಾಷಾಡ 1 2 3 4 ಪಾದಗಳು, ಉತ್ತರಾಷಾಢ 1 ನೇ ಪಾದ ಈ ರಾಶಿಯವರಿಗೆ ಈ ವರ್ಷ ವರ್ಷಾರಂಭದಲ್ಲಿ ದೇಹ ಸೌಖ್ಯ, ಮಾನಸಿಕವಾಗಿ ನೆಮ್ಮದಿ ಇರುವುದು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉತ್ತಮ ಫಲಗಳನ್ನು ಕಾಣಲಿದ್ದಾರೆ. ಫೆಬ್ರವರಿ ಬಳಿಕ ಭಾಗ್ಯಕ್ಕೆ ಕುತ್ತು ಬರುವುದು. ಆರ್ಥಿಕವಾಗಿ ಇದ್ದಕ್ಕಿದ್ದಂತೆ ನಷ್ಟ ಅನುಭವಿಸಬೇಕಾದೀತು. ಮನೆಯವರೊಡನೆಯೇ ಮನಸ್ತಾಪಗಳಾಗುವ ಸಾಧ್ಯತೆ. ಏಪ್ರಿಲ್ ಬಳಿಕ ಸ್ತ್ರೀಯರಿಗೆ ಚಿನ್ನಾಭರಣಗಳ ಖರೀದಿ ಯೋಗ. ಮಕ್ಕಳ ವಿವಾಹಕ್ಕಾಗಿ ಪ್ರಯತ್ನಿಸುತ್ತಿದ್ದರೆ ಆಗಸ್ಟ್ ವರೆಗೆ ಕಾಯುವುದು ಉತ್ತಮ. ಸೆಪ್ಟೆಂಬರ್ ಬಳಿಕ ಮಹಿಳೆಯರಿಗೆ ಕಣ್ಣಿಗೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಆದರೆ ನವಂಬರ್ ಬಳಿಕ ಉತ್ತಮ ಫಲಗಳನ್ನು ಕಾಣುವಿರಿ. ವಾಹನ ಖರೀದಿ ಯೋಗವಿದೆ. ಚಾಡಿ ಹೇಳುವವರಿಂದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವರ್ಷಾಂತ್ಯದಲ್ಲಿ ದೈಹಿಕ, ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಆದರೆ ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವವರು ಇರುತ್ತಾರೆ. ಸ್ವಲ್ಪದರಲ್ಲೇ ವಂಚನೆಯೊಂದ ಪಾರಾಗಲಿದ್ದೀರಿ. ಈ ರಾಶಿಯವರು ಈ ವರ್ಷ ಮಹಾವಿಷ್ಣುವಿನ ಪ್ರಾರ್ಥನೆ ಮಾಡುವುದರಿಂದ ಶುಭ ಫಲಗಳನ್ನು ಕಾಣಲಿದ್ದಾರೆ.