ಕುಂಭ
ಕುಂಭ: ಧನಿಷ್ಟ 3, 4 ಪಾದಗಳು, ಶತಭಿಷಂ, ಪೂರ್ವಾಭಾದ್ರ 1, 2, 3 ಪಾದಗಳು.
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ದಾಯಾದಿ ಮನಸ್ತಾಪಗಳು, ಕೌಟುಂಬಿಕ ಕಲಹಗಳಿಂದ ದೇಹಾಯಾಸ, ಮಾನಸಿಕವಾಗಿ ತುಮುಲಗಳು ಇರಲಿವೆ. ಆದರೆ ಏಪ್ರಿಲ್ ಬಳಿಕ ಭಾಗ್ಯ ಒಲಿಯುವುದು. ಆರ್ಥಿಕವಾಗಿ ಉನ್ನತ ಸ್ಥಾನಮಾನಕ್ಕೇರಲಿದ್ದೀರಿ. ಮಕ್ಕಳಿಂದ ಶುಭ ವಾರ್ತೆಗಳು ಕೇಳಿಬಂದೀತು. ಏಪ್ರಿಲ್ ಬಳಿಕ ಅವಿವಾಹಿತರಿಗೆ ವಿವಾಹವಾಗುವ ಯೋಗವಿರಲಿದೆ. ಸೆಪ್ಟೆಂಬರ್ ಬಳಿಕ ವ್ಯವಹಾರಗಳು ಕೈ ಹಿಡಿದು ಆರ್ಥಿಕವಾಗಿ ಸಬಲರಾಗುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಉತ್ತಮ. ಅಕ್ಟೋಬರ್ ನಲ್ಲಿ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗುವ ಸಂಭವ. ಆದರೆ ಮಕ್ಕಳಿಂದ ಹಿತ. ವರ್ಷಾಂತ್ಯದಲ್ಲಿ ನಿಂದನೆಗೊಳಗಾಗುವ ಅಪಾಯವಿದ್ದು, ಎಚ್ಚರಿಕೆಯಿಂದಿರಿ. ಈ ರಾಶಿಯವರಿಗೆ ವರ್ಷವಿಡೀ ತಲೆನೋವು, ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಪದೇ ಪದೇ ಬರುತ್ತಲೇ ಇರುತ್ತವೆ. ನೆಮ್ಮದಿಗಾಗಿ ಈ ವರ್ಷ ಶಿವ, ವಿಷ್ಣುವಿನ ಆರಾಧನೆ ಮಾಡುತ್ತಾ ಬನ್ನಿ.