ತುಲಾ
ತುಲಾ: ಚಿತ್ತ 3, 4 ಪಾದಗಳು, ಸ್ವಾತಿ, ವಿಶಾಖ 1, 2, 3 ಪಾದಗಳು.
ಈ ರಾಶಿಯವರಿಗೆ ವರ್ಷದ ಆರಂಭದ ಮೂರು ತಿಂಗಳು ಉತ್ತಮ ಫಲಗಳನ್ನು ಪಡೆಯುವ ಯೋಗವಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಲಿದ್ದೀರಿ. ಉದ್ಯೋಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆ. ಮಾರ್ಚ್ ಬಳಿಕ ದೇಹಾರೋಗ್ಯದಲ್ಲಿ ಕೊಂಚ ತೊಂದರೆಗಳು ಕಂಡುಬಂದೀತು. ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಜುಲೈ ಬಳಿಕ ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದೀರಿ. ಆಗಸ್ಟ್ ಕೊನೆಯಲ್ಲಿ ಹಣಕಾಸಿನ ಲಾಭವಾಗಲಿದೆ. ಉಳಿತಾಯ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನವಂಬರ್ ಬಳಿಕ ಕೆಲವೊಂದು ಕೆಟ್ಟ ವ್ಯಸನದ ಬಗ್ಗೆ ಮನಸ್ಸು ಓಲಾಡಲಿದೆ. ಆದರೆ ಸ್ತ್ರೀಯರಿಂದ ನಿಮಗೆ ಒಳಿತಾಗಲಿದೆ. ಹೊಸ ವಸ್ತುಗಳನ್ನು ಖರೀದಿಸುವ ಯೋಗ. ಮಕ್ಕಳ ವಿಚಾರದಲ್ಲಿ ತೊಂದರೆಗಳು ಎದುರಾದರೂ ಅದು ಕ್ಷಣಿಕವಾಗಿರಲಿದೆ. ಈ ರಾಶಿಯವರು ತಪ್ಪದೇ ದುರ್ಗಾ ದೇವಿಯ ಪೂಜೆ ಮಾಡುತ್ತಾ ಬಂದರೆ ಉತ್ತಮ.