ಸಿಂಹ
ಸಿಂಹ : ಮಖ, ಪೂರ್ವ ಪಾಲ್ಗುಣಿ, ಉತ್ತರ ಪಾಲ್ಗುಣಿ 1ನೇ ಪಾದ
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದೀತು. ಮನೆ ಕಟ್ಟುವ ಕೆಲಸಗಳನ್ನು ಆರಂಭಿಸಿದರೆ ಅರ್ಧಕ್ಕೇ ನಿಂತು ಹೋಗುವ ಸಂಭವ. ಆಲಸ್ಯತನ, ಮೈಮರೆವು ಹೆಚ್ಚಾದೀತು. ಆದರೆ ಫೆಬ್ರವರಿ ಬಳಿಕ ಚಿಂತೆಗಳು, ಸಮಸ್ಯೆಗಳು ದೂರವಾಗಲಿದ್ದು ತಕ್ಕಮಟ್ಟಿಗೆ ಯಶಸ್ಸು ಕಂಡುಬರುವುದು. ಕೆಲವೊಂದು ಉನ್ನತ ಕಾರ್ಯಗಳನ್ನು ಮಾಡುವ ಯೋಗ ನಿಮ್ಮದಾಗಲಿದೆ. ಆದರೆ ಮಾರ್ಚ್ ಬಳಿಕ ಸ್ತ್ರೀಯರ ನಿಮಿತ್ತ ಕಲಹಗಳಾದೀತು. ಆದರೆ ಅದು ಕೆಲವು ಸಮಯ ಮಾತ್ರ. ನಂತರ ಪರಿಹಾರವಾಗಲಿದೆ. ಜೂನ್ ಬಳಿಕ ಕೆಲಸದ ನಿಮಿತ್ತ ಅನ್ಯ ಪ್ರದೇಶಕ್ಕೆ ಸಂಚಾರ ಮಾಡುವ ಯೋಗ ನಿಮ್ಮದಾಗುವುದು. ಅಕ್ಟೋಬರ್ ಬಳಿಕ ಆರೋಗ್ಯದಲ್ಲಿ ಕೊಂಚ ಏರುಪೇರಾದೀತು. ನವಂಬರ್ ಬಳಿಕ ಮಕ್ಕಳಿಂದ ಸುಖ, ಗೌರವ ಪ್ರಾಪ್ತಿಯಾಗುವುದು. ಉದ್ಯೋಗ ಬದಲಾವಣೆ ಸಂಭವವೂ ಇದೆ. ಈ ರಾಶಿಯವರು ಕಷ್ಟಗಳ ಪರಿಹಾರಕ್ಕಾಗಿ ಶಿವನ ಆರಾಧನೆ ಮಾಡುವುದು ಸೂಕ್ತ.