Select Your Language

Notifications

webdunia
webdunia
webdunia
webdunia

ಜಾತಕ

ಮೀನ
ಮೀನ: ಪೂರ್ವಾಬಾದ್ರ 4ನೇ ಪಾದ, ಉತ್ತರಾಬಾದ್ರ, ರೇವತಿ ಈ ರಾಶಿಯವರಿಗೆ ವರ್ಷದ ಆರಂಭದಲ್ಲೇ ಎಷ್ಟೇ ಎಚ್ಚರಿಕೆಯಿಂದ ಕಾರ್ಯನಿರ್ಹಿಸುತ್ತಿದ್ದರೂ ಕೆಲವೊಂದು ಅಪಾಯಗಳು ತಾನಾಗಿಯೇ ಎದುರಾಗಲಿದೆ. ನಯವಂಚಕರ ಬಗ್ಗೆ ಎಚ್ಚರವಿರಲಿ. ಫೆಬ್ರವರಿ ಬಳಿಕ ದನಾದಾಯದಲ್ಲಿ ಕೊಂಚ ಅಡೆತಡೆಗಳು ಎದುರಾದೀತು. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಏಪ್ರಿಲ್ ಬಳಿಕ ಮಕ್ಕಳಿಂದ ಗೌರವಾದರಗಳು ಹೆಚ್ಚಾಗಲಿವೆ. ಜೂನ್ ನಲ್ಲಿ ದೈಹಿಕ ಆರೋಗ್ಯದಲ್ಲಿ ಏರುಪೇರಾದೀತು. ಸೆಪ್ಟೆಂಬರ್ ಬಳಿಕ ದೇಹ ಸೌಖ್ಯವಾಗುವುದು. ಅಕ್ಟೋಬರ್ ನಲ್ಲಿ ಮನೆಯಲ್ಲಿ ಮಂಗಳ ಕಾರ್ಯನೆರವೇರಿಸುವ ಯೋಗ. ಭೋಜನ ಮಾಡುವ ಯೋಗ. ನವಂಬರ್ ಬಳಿಕ ನಿಮ್ಮ ವೃತ್ತಿಯಲ್ಲಿ ಮೈಮರೆತರೆ ಅಪವಾದಗಳನ್ನು ಕೇಳಬೇಕಾದೀತು. ವರ್ಷಾಂತ್ಯದಲ್ಲಿ ಸಂಗಾತಿಯಿಂದ ಸುಖ, ನೆಮ್ಮದಿ ಸಿಗಲಿದೆ. ನಿಮ್ಮ ಮನಸ್ಸಿನ ನೆಮ್ಮದಿಗಾಗಿ ಈಶ್ವರನ ಪ್ರಾರ್ಥನೆ ಮಾಡುತ್ತಾ ಬಂದರೆ ಉತ್ತಮ.