Select Your Language

Notifications

webdunia
webdunia
webdunia
webdunia

ಪುರುಷರು ಸಿಕ್ಸ್ ಪ್ಯಾಕ್ ಬೇಕೆಂದರೆ ಈ ಯೋಗ ಮಾಡಬಹುದು

Boat Pose
ಬೆಂಗಳೂರು: ಪುರುಷರು ಸದಾ ಸುಂದರವಾಗಿರಲು ದೇಹದಾರ್ಢ್ಯ ಬೆಳೆಸಿಕೊಳ್ಳಲು ಯತ್ನಿಸುತ್ತಾರೆ. ಅದರಲ್ಲೂ ಸಿಕ್ಸ್ ಪ್ಯಾಕ್ ಬರಿಸಲು ಏನೆಲ್ಲವೋ ಕಸರತ್ತು ಮಾಡುತ್ತಾರೆ. ಆದರೆ ಸಿಕ್ಸ್ ಪ್ಯಾಕ್ ಗೆ ಈ ಒಂದು ಯೋಗ ಮಾಡಿದರೆ ಸಾಕು. ಅದು ಯಾವುದು ನೋಡಿ.

ಯೋಗದಲ್ಲಿ ಯಾವ ಸಮಸ್ಯೆಗಳಿಗೆ ಪರಿಹಾರವಿಲ್ಲ ಹೇಳಿ? ಜಿಮ್ ಗೆ ಹೋಗಿ ಗಂಟೆಗಟ್ಟಲೆ ಕಸರತ್ತು ಮಾಡುವ ಬದಲು ಮನೆಯಲ್ಲಿಯೇ ಯೋಗ ಮಾಡಿ ದೇಹ ದಂಡಿಸುವ ಮೂಲಕ ದೇಹದಾರ್ಡ್ಯ ಪಡೆಯಬಹುದು. ಪುರುಷರು ಸಿಕ್ಸ್ ಪ್ಯಾಕ್ ದೇಹ ಬೇಕೆಂದರೆ ನವಾಸನ ಯೋಗ ಭಂಗಿ ಮಾಡಬಹುದು. ಅದನ್ನು ಮಾಡುವುದು ಹೇಗೆ ಇಲ್ಲಿದೆ ವಿವರ.

ನವಾಸನ ಮಾಡುವುದು ಹೇಗೆ
ನೆಲದ ಮೇಲೆ ನಿಮ್ಮ ಆಸನದ ಜಾಗ ಬ್ಯಾಲೆನ್ಸ್ ಆಗಿರುವಂತೆ ಕೂತುಕೊಳ್ಳಿ
ಎದೆಯನ್ನು ಉಬ್ಬಿಸಿ, ಎರಡೂ ಕಾಲುಗಳನ್ನು ಕುಳಿತ ಭಂಗಿಯಲ್ಲೇ ಮೇಲಕ್ಕೆತ್ತಿ.
ಎರಡೂ ಕೈಗಳನ್ನು ಮುಂದಕ್ಕೆ ಚಾಚಿ ಮೇಲಕ್ಕೆತ್ತಿ ಕಾಲಿನ ಪಾದ ಮತ್ತು ಮಣಿಗಂಟಿನ ಸಮಾನವಾಗಿರುವಂತೆ ನೋಡಕೊಳ್ಳಿ
ಈ ಭಂಗಿಯಲ್ಲಿರುವಾಗ ಬೆನ್ನು ಬಾಗದಂತೆ ಎಚ್ಚರಿಕೆ ವಹಿಸಿ.

ಈ ಭಂಗಿಯನ್ನು ನೋಡುವಾಗ ಥೇಟ್ ಬೋಟ್ ನ ಶೇಪ್ ನಲ್ಲಿರುತ್ತದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಎದೆಯ ಮಾಂಸಖಂಡಗಳು ಬಲಗೊಳ್ಳುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಸ್ಕರ ಹಚ್ಚುವ ಮೊದಲು ಈ ನಿಯಮಗಳನ್ನು ಪಾಲಿಸಬೇಕು