Select Your Language

Notifications

webdunia
webdunia
webdunia
webdunia

ಮಸ್ಕರ ಹಚ್ಚುವ ಮೊದಲು ಈ ನಿಯಮಗಳನ್ನು ಪಾಲಿಸಬೇಕು

Mascara

Krishnaveni K

ಬೆಂಗಳೂರು , ಬುಧವಾರ, 14 ಆಗಸ್ಟ್ 2024 (13:44 IST)
Photo Credit: Facebook
ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಮಸ್ಕರ ಹಚ್ಚಿಕೊಳ್ಳುತ್ತಾರೆ. ಆದರೆ ಮಸ್ಕರ ಹಚ್ಚಿಕೊಳ್ಳುವಾಗ ಈ ಕೆಲವೊಂದು ನಿಯಮಗಳನ್ನು ಪಾಲಿಸುವುದು ಮುಖ್ಯ.

ಮಸ್ಕರ ಎಂದಲ್ಲ, ಯಾವುದೇ ಮೇಕಪ್ ಸಾಧನವನ್ನೂ ಹಿತಮಿತವಾಗಿ, ಸರಿಯಾದ ರೀತಿಯಲ್ಲಿ ಬಳಸಿಕೊಂಡರೇ ಚಂದ. ಅಗತ್ಯಕ್ಕಿಂತ ಹೆಚ್ಚು ಮೇಕಪ್ ಚರ್ಮದ ಆರೋಗ್ಯಕ್ಕೂ ಒಳ್ಳೆಯದಲ್ಲ, ಜೊತೆಗೆ ನಿಮ್ಮ ಅಂದವನ್ನೂ ಕೆಡಿಸಬಹುದು. ಹೀಗಾಗಿ ಮಸ್ಕರ ಹಚ್ಚಿಕೊಳ್ಳುವ ಮೊದಲು ಈ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ.

ಮಸ್ಕರವನ್ನು ನೀವು ಮೊದಲು ಮೇಲಿನ ರೆಪ್ಪೆಗಳಿಗೆ ಹಚ್ಚಿ ನಂತರ ಕೆಳಗಿನ ರೆಪ್ಪೆಗೆ ಹಚ್ಚಬೇಡಿ. ಇದರಿಂದ ಇಡೀ ಮೇಲಿನ ಭಾಗ ಕಪ್ಪಾಗಿ ಕಾಣಬಹುದು. ಅದರ ಬದಲು ಮೊದಲು ಕೆಳಗಿನ ಭಾಗಕ್ಕೆ ಹಚ್ಚಿ ನಂತರ ಮೇಲ್ಭಾಗಕ್ಕ ಹಚ್ಚಿದರೆ ಉತ್ತಮ. ಮಸ್ಕರ ಟ್ಯೂಬ್ ಗೆ ಆದಷ್ಟು ಗಾಳಿ ಸೋಕದಂತೆ ನೋಡಿಕೊಳ್ಳಿ. ಇಲ್ಲದೇ ಹೋದರೆ ಅದು ಗಂಟು ಕಟ್ಟಬಹುದು.

ಮಸ್ಕರಾ ಹಚ್ಚಿಕೊಳ್ಳುವ ಮೊದಲು ಕೌನ್ಸಿಲರ್ ಬಳಸಿ ನಂತರ ಮಸ್ಕರಾ ಹಚ್ಚಿ. ಇಲ್ಲದೇ ಹೋದರೆ ಅದು ಒದ್ದೆಯಾಗಿ ಹರಡಿಕೊಳ್ಳಬಹುದು. ಇನ್ನು, ಒಂದೇ ಮಸ್ಕರ ಟ್ಯೂಬ್ ನ್ನು ತುಂಬಾ ಸಮಯದವರೆಗೆ ಬಳಸಬೇಡಿ. ಇದರಿಂದ ಸ್ಕಿನ್ ಅಲರ್ಜಿಯಾಗುವ ಸಾಧ್ಯತೆಯಿದೆ. ನೀವು ಬಳಸುವ ಮಸ್ಕರವನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದರಿಂದ ಸೋಂಕು ಹರಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಲಗಿದ ತಕ್ಷಣ ನಿದ್ರೆ ಬರುತ್ತಿಲ್ಲ ಎನ್ನುವವರು ಒಮ್ಮೇ ಹೀಗೇ ಮಾಡಿ ನೋಡಿ