Select Your Language

Notifications

webdunia
webdunia
webdunia
webdunia

ಉಗುರುಗಳು ಬಿರುಕು ಅಥವಾ ಒಡೆಯುವುದು ಯಾಕೆ

Nails

Krishnaveni K

ಬೆಂಗಳೂರು , ಗುರುವಾರ, 30 ಮೇ 2024 (12:24 IST)
ಬೆಂಗಳೂರು: ಅಂದವಾಗಿ ಬೆಳೆಸಿದ ಉಗುರುಗಳು ಇದ್ದಕ್ಕಿದ್ದಂತೆ ಬಿರುಕುಂಟಾದಾಗ ಅಥವಾ ಒಡೆದಾಗ ಚಿಂತೆಯಾಗುತ್ತದೆ. ಉಗುರುಗಳು ಈ ರೀತಿ ಬ್ರೇಕ್ ಆಗುವುದಕ್ಕೆ ಕಾರಣಗಳಿವೆ. ಅವು ಏನೆಂದು ನೋಡೋಣ.

ಪ್ರಮುಖವಾಗಿ ದೇಹದಲ್ಲಿ ರಕ್ತಹೀನತೆ, ಕ್ಯಾಲ್ಶಿಯಂ ಅಂಶ ಕೊರತೆಯಾದಾಗ ಉಗುರುಗಳು ಒಡೆಯುವ ಅಥವಾ ಬಿರುಕು ಮೂಡುವ ಲಕ್ಷಣಗಳು ಕಂಡುಬರುತ್ತವೆ. ಉಗುರುಗಳಲ್ಲಿ ಬಿಳಿ ಬಣ್ಣದ ಗುರುತು ಕಂಡುಬರುವುದೂ ಪೋಷಕಾಂಶಗಳ ಕೊರತೆಯ ಲಕ್ಷಣವಾಗಿದೆ.

ಇದಲ್ಲದೆ ಕೆಲವೊಂದು ಫಂಗಲ್ ಸೋಂಕು ಉಗುರು ಒಡೆಯುವಿಕೆಗೆ ಕಾರಣವಾಗಬಹುದು. ಉಗುರಿನ ಸುತ್ತ ಸೋಂಕು, ಕೆಲವೊಂದು ರೋಗಗಳ ಕಾರಣದಿಂದ ಅಥವಾ ಕೆಲವೊಂದು ರೋಗಗಳಿಗೆ ತೆಗೆದುಕೊಳ್ಳುವ ಔಷಧಿಗಳಿಂದ ಉಗುರು ಒಡೆಯುವ ಸಾಧ್ಯತೆಯಿದೆ.

ಇನ್ನು ಕೆಲವರಿಗೆ ಉಗುರು ಅಂದಗಾಣಿಸಲು ಬಳಸುವ ನೈಲ್ ಪಾಲಿಶ್ ಕೂಡಾ ಅಲರ್ಜಿಯಾಗಬಹುದು. ಇದರಲ್ಲಿರುವ ರಾಸಾಯನಿಕದಿಂದ ಅಲರ್ಜಿಯಾಗಿ ಉಗುರು ಒಡೆಯುವ ಲಕ್ಷಣ ಕಂಡುಬರಬಹುದು. ಅಥವಾ ವಯಸ್ಸಾಗುತ್ತಿದ್ದಂತೇ, ಇಲ್ಲವೇ ಉಗುರಿನ ಸುತ್ತ ತೇವಾಂಶ ಅಧಿಕವಾದಾಗ ಇಂತಹ ಲಕ್ಷಣ ಕಂಡುಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದರೆ ಈ ಸಿಂಪಲ್ ಮನೆ ಮದ್ದು ಮಾಡಿ