Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

Gautam Gambhir

Krishnaveni K

ಮುಂಬೈ , ಮಂಗಳವಾರ, 18 ನವೆಂಬರ್ 2025 (10:22 IST)
ಮುಂಬೈ: ಟೀಂ ಇಂಡಿಯಾವನ್ನು ಟೆಸ್ಟ್ ಮಾದರಿಯಲ್ಲಿ ಹಳ್ಳ ಹಿಡಿಸಿರುವ ಕೋಚ್ ಗೌತಮ್ ಗಂಭೀರ್ ತಾವು ಆಡುತ್ತಿದ್ದಾಗ ಅವರ ಟೆಸ್ಟ್ ರೆಕಾರ್ಡ್ ಹೇಗಿತ್ತು ಇಲ್ಲಿದೆ ನೋಡಿ ವಿವರ.

ಟೆಸ್ಟ್ ಕ್ರಿಕೆಟ್ ಗಿಂತ ಗೌತಮ್ ಗಂಭೀರ್ ಏಕದಿನ ಮಾದರಿಯಲ್ಲಿ ಮಿಂಚಿದ್ದೇ ಹೆಚ್ಚು. ಕೋಚ್ ಆಗಿಯೂ ಅವರ ಐಪಿಎಲ್ ಸಕ್ಸಸ್ ನೋಡಿ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿತ್ತು. ಟಿ20 ಮಾದರಿಯಲ್ಲಿ ಈಗಲೂ ಅವರು ಬೆಸ್ಟ್ ಕೋಚ್. ಆದರೆ ಟೆಸ್ಟ್ ತಂಡಕ್ಕೆ ಅವರ ತಳ ಬುಡವಿಲ್ಲದ ಯೋಜನೆಗಳು ಇಷ್ಟು ಸಮಯ ರೋಹಿತ್, ದ್ರಾವಿಡ್, ಕೊಹ್ಲಿ ಸೇರಿ ಹಾಕಿದ್ದ ಅಡಿಪಾಯವನ್ನೇ ಒಡೆದು ಹಾಕಿದೆ.

ಗೌತಮ್ ಗಂಭೀರ್ ಟೆಸ್ಟ್ ಮಾದರಿಯಲ್ಲಿ ಒಟ್ಟು 58 ಪಂದ್ಯಗಳನ್ನು ಆಡಿದ್ದಾರೆ. ಇದರಿಂದ ಅವರು ಗಳಿಸಿದ್ದ 4154 ರನ್. ಈ ಪೈಕಿ 9 ಶತಕ, 22 ಅರ್ಧಶತಕ ಸೇರಿದೆ. 51.59 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಒಟ್ಟು 5 ಬಾರಿ ಅವರು ಅಜೇಯರಾಗುಳಿದಿದ್ದರು. ಒಮ್ಮೆ ದ್ವಿಶತಕವನ್ನೂ ಸಿಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಅವರು ಭಾರತದ ಪರ ಟೆಸ್ಟ್ ಮಾದರಿಯಲ್ಲಿ ಕೆಲವು ಉತ್ತಮ ಇನಿಂಗ್ಸ್ ಗಳನ್ನೂ ಆಡಿದ್ದಾರೆ. ಒಂದು ಹಂತದಲ್ಲಿ ಗಂಗೂಲಿ ಬಳಿಕ ಭಾರತಕ್ಕೆ ಸಿಕ್ಕ ಉತ್ತಮ ಎಡಗೈ ಬ್ಯಾಟಿಗ ಎನಿಸುವಂತೆ ಬ್ಯಾಟಿಂಗ್ ಮಾಡಿದ್ದೂ ಇದೆ. ಆದರೆ ಈಗ ಕೋಚ್ ಆಗಿ ಅವರಿಂದ ಟೆಸ್ಟ್ ಮಾದರಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಅದರಲ್ಲೂ ಭಾರತ ತಂಡದಲ್ಲಿದ್ದ ಟೆಸ್ಟ್ ಸ್ಪೆಷಲಿಸ್ಟ್ ಅನುಭವಿಗಳನ್ನೆಲ್ಲಾ ಏಕಕಾಲಕ್ಕೆ ನಿವೃತ್ತಿಯಾಗುವಂತೆ ಮಾಡಿ ಯುವಕರನ್ನು ಕಟ್ಟಿಕೊಂಡು ಏಗಲಾಗದೇ ಹೆಣಗಾಡುತ್ತಿದ್ದಾರೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ