ಬೆಂಗಳೂರು: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ಮೊಬೈಲ್ ಮಾತ್ರವಲ್ಲ. ದುಡ್ಡು ಕೊಟ್ರೆ ಇನ್ನೂ ಏನೆಲ್ಲಾ ಸಿಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಒಂದೊಂದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ನಾವೇನೋ ಅಪರಾಧಿಗಳು ಜೈಲು ಪಾಲಾಗಿದ್ದಾರೆ ಎಂದರೆ ಅಲ್ಲಿ ಕಠಿಣ ಶಿಕ್ಷೆಯಾಗುತ್ತದೆ ಎಂದು ನಂಬುತ್ತೇವೆ. ಆದರೆ ಅಲ್ಲಿ ನಡೆಯುವುದೇ ಬೇರೆ.
ಭ್ರಷ್ಟ ಅಧಿಕಾರಿಗಳಿಂದಾಗಿ ಜೈಲಿನಲ್ಲಿ ಹೊರಗೆ ಇರುವುದಕ್ಕಿಂತಲೂ ಬಿಂದಾಸ್ ಲೈಫ್ ಖೈದಿಗಳಿಗೆ ಸಿಗುತ್ತಿದೆ. ಉಗ್ರ ಜುನೈದ್, ವಿಕೃತ ಕಾಮಿ ಉಮೇಶ್ ರೆಡ್ಡಿ ಮೊಬೈಲ್ ಬಳಸುವ ವಿಡಿಯೋಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಖೈದಿಗಳು ಎಣ್ಣೆ, ಮಾಂಸ ಪಾರ್ಟಿ ಮಾಡಿಕೊಂಡು ಬಿಂದಾಸ್ ಆಗಿ ತಟ್ಟೆಗೆ ಹೊಡೆದುಕೊಂಡು ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿದೆ. ಈ ವಿಡಿಯೋಗಳು ಈಗ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದು, ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ.