Publish Date: Mon, 10 Nov 2025 (08:37 IST)
Updated Date: Mon, 10 Nov 2025 (08:39 IST)
ಬೆಂಗಳೂರು: ನವಂಬರ್ ಬಂದರೂ ರಾಜ್ಯದಲ್ಲಿ ಮಳೆ ಕಡಿಮೆಯಾಗಿಲ್ಲ. ಈ ವಾರ ಮಳೆ ಕಡಿಮೆಯಾಗುತ್ತಾ, ಇಲ್ಲವೇ ಮಳೆಯಿರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ.
ಕಳೆದ ವಾರ ಆರಂಭದಲ್ಲಿ ಸೈಕ್ಲೋನ್ ಪರಿಣಾಮ ಸ್ವಲ್ಪ ಮಳೆಯಾಗಿತ್ತು. ಈ ಬಾರಿ ಮುಂಗಾರು ಮಳೆಯಂತೇ ಹಿಂಗಾರು ಮಳೆಯೂ ಉತ್ತಮವಾಗಿತ್ತು. ಆದರೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಚಳಿಯ ವಾತಾವರಣ ಕಂಡುಬರುತ್ತಿದೆ.
ಹವಾಮಾನ ವರದಿಗಳ ಪ್ರಕಾರ ಈ ವಾರವಿಡೀ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿರಲಿದೆ. ಕೆಲವೆಡೆ ಮಾತ್ರ ಸ್ವಲ್ಪ ಮೋಡ ಕವಿದ ವಾತಾವರಣ ಕಂಡುಬಂದೀತು. ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಮಾತ್ರ ವಾರದ ಮಧ್ಯಭಾಗದಲ್ಲಿ ಎರಡು ದಿನ ಸ್ವಲ್ಪ ಮಳೆಯಾಗಬಹುದು. ಅದು ಬಿಟ್ಟರೆ ಸದ್ಯದ ಮುನ್ಸೂಚನೆ ಪ್ರಕಾರ ಮಳೆಯ ಸಾಧ್ಯತೆಯಿಲ್ಲ.
ಉಳಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಬೆಂಗಳೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿತ್ರದುರ್ಗ, ಹಾವೇರಿ, ರಾಯಚೂರು, ಗದಗ, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಯಾದಗಿರಿ, ಶಿವಮೊಗ್ಗ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ವಾರವಿಡೀ ಬಿಸಿಲಿನ ವಾತಾವರಣವಿರಲಿದೆ.