Select Your Language

Notifications

webdunia
webdunia
webdunia
webdunia

ಟ್ರಬಲ್ ಶೂಟರ್‌ಗೆ ಕಸದ ಮಾಫಿಯಾ ತಡೆಯಲು ಸಾಧ್ಯವಾಗುತ್ತಿಲ್ಲ: ಡಿಕೆಶಿ ಕಾಲೆಳೆದ ಅಶೋಕ್‌

Leader of Opposition R.Ashok, DCM D.K.Sivakumar, Bangalore Garbage problem

Sampriya

ಬೆಂಗಳೂರು , ಭಾನುವಾರ, 9 ನವೆಂಬರ್ 2025 (10:39 IST)
ಬೆಂಗಳೂರು: ಸಿಲಿಕಾನ್‌ ಸಿಲಿಯ ಮೂಲಸೌಕರ್ಯ ಸಮಸ್ಯೆ ಸರಿಪಡಿಸಲು ಸಾಧ್ಯವಾಗದಿದ್ದರೆ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಒತ್ತಾಯಿಸಿದ್ದಾರೆ. 

ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆಯಲು ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಇದೇ ವೇಳೆ ಈ ಅಭಿಯಾನವನ್ನು ನಗರದ ಇತರ ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು ಎಂದೂ ಅಶೋಕ್‌ ಘೋಷಿಸಿದರು.

ನಗರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು ಶಿವಕುಮಾರ್ ವಿಫಲರಾದರೆ, ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಅಶೋಕ್‌ ಆಗ್ರಹಿಸಿದರು. 

ಅಕ್ಟೋಬರ್ 31 ರೊಳಗೆ ಬೆಂಗಳೂರನ್ನು ಗುಂಡಿ ಮುಕ್ತಗೊಳಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಗಡುವು ನೀಡಿದ್ದರು. ಆದರೆ ಅದು ಆಗಲಿಲ್ಲ. ತಾನು ಟ್ರಬಲ್ ಶೂಟರ್ ಎಂದು ಡಿಸಿಎಂ ಹೇಳಿಕೊಳ್ಳುತ್ತಾರೆ, ಆದರೆ, ಅವರಿಗೆ ಕಸದ ಮಾಫಿಯಾವನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸರ್ಕಾರ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟಿದೆ: ಕುಮಾರಸ್ವಾಮಿ ವ್ಯಂಗ್ಯ