ಬೆಂಗಳೂರು: ಕೆಲವರಿಗೆ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಹೋಗಿ ರೋಲರ್ ಕಾಸ್ಟರ್ ನಲ್ಲಿ ಕೂರುವುದು ಮಜಾ ಕೊಡುವ ವಿಚಾರ. ಆದರೆ ಹೀಗೇ ಮಜಾ ಮಾಡಲು ರೋಲರ್ ಕಾಸ್ಟರ್ ನಲ್ಲಿ ಕೂತಿದ್ದ ಮಹಿಳೆ ಪ್ರಾಣವನ್ನೇ ಕಳೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ.
ಬೆಂಗಳೂರಿನ ಅಮ್ಯೂಸ್ ಮೆಂಟ್ ಪಾರ್ಕ್ ಒಂದರಲ್ಲಿ ನಡೆದ ಘಟನೆಯಿದು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವು ಹೀಗೂ ಬರಬಹುದೇ ಎಂದು ನಿಮಗೇ ಈ ವಿಡಿಯೋ ನೋಡಿದರೆ ಶಾಕ್ ಆಗಬಹುದು.
ತನ್ನ ಸಂಗಡಿಗರ ಜೊತೆ ರೋಲರ್ ಕಾಸ್ಟರ್ ನಲ್ಲಿ ಯುವತಿಯೊಬ್ಬಳು ಕೂತಿದ್ದಳು. ಆಗಷ್ಟೇ ಅದು ಚಲಿಸಲು ಆರಂಭವಾಗಿತ್ತು. ಈ ವೇಳೆ ಯುವತಿ ಏದುಸಿರು ಬಂದಂತೆ ಮಾಡಿದ್ದಳು. ಏನೋ ಗಾಬರಿಯಿಂದ ಹೀಗೆ ಮಾಡಿರಬಹುದು ಎಂದು ಹತ್ತಿರದಲ್ಲಿದ್ದವರು ಮುಖಕ್ಕೆ ನೀರು ಹಾಕಿದರು. ಇನ್ನೊಬ್ಬಾತ ಎದ್ದೇಳಿಸಲು ಯತ್ನಿಸಿದ್ದಾರೆ.
ಆದರೆ ಯುವತಿ ಕುಳಿತಲ್ಲಿಯೇ ಹೃದಯಾಘಾತಕ್ಕೊಳಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಳು. ತಕ್ಷಣವೇ ರೋಲರ್ ಕಾಸ್ಟರ್ ನ್ನು ನಿಲ್ಲಿಸಿ ಯುವತಿಯನ್ನು ಎತ್ತಿಕೊಂಡು ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಆಕೆಯ ಪ್ರಾಣ ಹೋಗಿತ್ತು.