ಬೆಂಗಳೂರು: ಆರ್ ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಬೇಕು, ಆದರೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಲು ಅನುಮತಿ ಬೇಕಾ? ಈ ವಿಡಿಯೋ ನೋಡಿದರೆ ಹೀಗೊಂದು ಅನುಮಾನ ಮೂಡದೇ ಇರದು.
ಮೆಕ್ಕಾಗೆ ತೆರಳುತ್ತಿದ್ದ ಮುಸ್ಲಿಮರ ಗುಂಪು ಬೆಂಗಳೂರು ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು ಓಡಾಡುವ ಜಾಗದಲ್ಲೇ ನಮಾಜ್ ಮಾಡುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭದ್ರತಾ ಸಿಬ್ಬಂದಿಗಳ ಎದುರೇ ಘಟನೆ ನಡೆದಿದೆ.
ವಿಮಾನ ನಿಲ್ದಾಣವೆಂದರೆ ಅತೀ ಹೆಚ್ಚು ಭದ್ರತೆಯಿರುವ ಸೂಕ್ಷ್ಮವಲಯ. ಆದರೆ ಇಲ್ಲಿಯೇ ಪ್ರಯಾಣಿಕರು ಓಡಾಡುವ ಜಾಗದಲ್ಲಿ ನಮಾಜ್ ಮಾಡಿರುವ ವಿಡಿಯೋಗೆ ಬಿಜೆಪಿ ಹಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲಾ ಇವರಿಗೆ ಅನುಮತಿ ಕೊಟ್ಟವರು ಯಾರು ಎನ್ನುತ್ತಿದ್ದಾರೆ.
ಬಿಜೆಪಿ ಈ ಬಗ್ಗೆ ವಾಗ್ದಾಳಿ ನಡೆಸಿದ್ದು, ಆರ್ ಎಸ್ಎಸ್ ಶಾಂತಿಯುತವಾಗಿ ಪಥಸಂಚಲನ ಮಾಡುವುದಕ್ಕೆ ಸರ್ಕಾರ ಅನುಮತಿ ಬೇಕು ಎನ್ನುತ್ತದೆ. ಆದರೆ ಇವರು ಹೀಗೆ ಸಾರ್ವಜನಿಕ ಸ್ಥಳದಲ್ಲಿ ಅದೂ ಬೆಂಗಳೂರು ಏರ್ ಪೋರ್ಟ್ ನಲ್ಲಿ ನಮಾಜ್ ಮಾಡುವುದಕ್ಕೆ ಯಾರು ಅನುಮತಿ ನೀಡಿದ್ದಾರೆ, ಇವರಿಗೊಂದು ನ್ಯಾಯ, ಹಿಂದೂ ಸಂಘಟನೆಗೆ ಒಂದು ನ್ಯಾಯವೇ ಎಂದು ಕಿಡಿ ಕಾರಿದೆ.