Select Your Language

Notifications

webdunia
webdunia
webdunia
webdunia

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

wednesday Ganapati Pooje

Sampriya

ಬೆಂಗಳೂರು , ಬುಧವಾರ, 19 ನವೆಂಬರ್ 2025 (08:03 IST)
ವಾರದ ಏಳು ದಿನಗಳಲ್ಲಿ ಶಿವ ಪಾರ್ವತಿ ಪುತ್ರನಾದ ಗಣೇಶನಿಗೆ ಬುಧವಾರದಂದು ವಿಶೇಷವಾದ ದಿನ. ಈ ದಿನದಂದು ವಿಘ್ನ ವಿನಾಶಕನನ್ನು ಪೂಜಿಸಲ್ಪಟ್ಟರೆ ಜೀವನದಲ್ಲಿ ಎದುರಾಗುವ ಕಷ್ಟಗಳು ದೂರವಾಗುತ್ತದೆ. 

ಈ ದಿನದಂದು ಗಣೇಶನನ್ನು ವಿಶೇಷವಾಗಿ ಆರಾಧಿಸಲ್ಪಟ್ಟರೆ ವೃತ್ತಿ ಜೀವನದಲ್ಲಿನ ಹಾಗೂ ಹಣದ ಸಮಸ್ಯೆ ದೂರವಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. 

ಹಿಂದೂ ಜ್ಯೋತಿಷ್ಯದಲ್ಲಿ ವ್ಯಕ್ತಿಯೊಬ್ಬನ ಜಾತಕದಲ್ಲಿ ಬುಧ ದುರ್ಲಲವಾಗಿದ್ದಲ್ಲಿ ಈ ಕೆಲಕಿನ ಕೆಲಸಗಳನ್ನು ಮಾಡಿದ್ದಲ್ಲಿ ಜೀವನದಲ್ಲಿ ಭಾರೀ ಸಕಾರಾತ್ಮಕ ಫಲಿತಾಂಶ ಕಾಣಬಹುದು. 

ಬೆಳಗ್ಗೆ ಶಂಖ ನಾದ ಮಾಡಿ: ಬೆಳಗ್ಗೆ ದೇವರ ಪೂಜೆ ನಡೆಯುವಾಗ ಹಾಗೂ ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗುವ ಮುನ್ನಾ ಶಂಖ ಊದಿ. ಇದರಿಂದ ನಿಮ್ಮ ಸುತ್ತಾ ಆವರಿಸಿಕೊಂಡಿರುವ ನೆಗೆಟಿವ್ ಎನರ್ಜಿ ದೂರವಾಗಿ ಸಕಾರಾತ್ಮಕ ಕಂಪನಗಳು ನಿಮ್ಮನ್ನು ಸುತ್ತುವರೆಯುತ್ತದೆ.. ಶಂಖವನ್ನು ಊದುವುದು ಹೆಚ್ಚುವರಿಯಾಗಿ ಯಶಸ್ಸಿನ ಹಾದಿಯನ್ನು ತೆರೆಯಬಹುದು ಮತ್ತು ಆರ್ಥಿಕ ಸವಾಲುಗಳನ್ನು ಕೊನೆಗೊಳಿಸಬಹುದು.

ತುಳಸಿ ಪೂಜೆ ಮಹತ್ವ: ಬುಧವಾರದಂದು ಮಡಿಯಲ್ಲಿ ತುಳಸಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಬೇಕು. ತುಪ್ಪದ ದೀಪ ಹಚ್ಚಿ, ತುಳಸಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಲ್ಲಿ ಎದುರಾಗಿದ್ದ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗುತ್ತದೆ. 

ಇನ್ನೂ ಬಡವರಿಗೆ, ಹಸಿವಿನಿಂದ ಬಳಲುತ್ತಿರುವವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದರಿಂದ ನಿಮ್ಮ ಜೀವನದ ಆಸೆಗಳು ಈಡೇರಿ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ದಾನ ಮಾಡುವಾಗ ಗಮನಿಸಬೇಕಾಗಿರುವುದು ಹೆಸರು ಕಾಳು, ಹಸಿರು ಬಣ್ಣದ ಬಟ್ಟೆ ಮತ್ತು ಅಗತ್ಯವಾದ ವಸ್ತುಗಳನ್ನು ದಾನವಾಗಿ ನೀಡಿದರೆ ಒಳಿತು. 

Share this Story:

Follow Webdunia kannada

ಮುಂದಿನ ಸುದ್ದಿ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ