Select Your Language

Notifications

webdunia
webdunia
webdunia
webdunia

ನೆರೆ ಹಾವಳಿ, ಬರ ಪರಿಹಾರ ವಿಚಾರದ ನಿಲುವಳಿ ಸೂಚನೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಗುರುವಾರ, 20 ನವೆಂಬರ್ 2025 (16:55 IST)
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ನೆರೆ ಹಾವಳಿ, ಬರ ಪರಿಹಾರ ವಿಚಾರವನ್ನು ನಿಲುವಳಿ ಸೂಚನೆಯಾಗಿ ಮಂಡಿಸಲಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 155ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಅವರು ಮಾತನಾಡಿದರು. ಈ ಪತ್ರಿಕಾಗೋಷ್ಠಿಗೂ ಮೊದಲು ಅವರು ಜೆಡಿಎಸ್ ವಿಧಾನ ಪರಿಷತ್ ಸದಸ್ಯರ ಜೊತೆ ಬೆಳಗಾವಿ ಅಧಿವೇಶನದ ಕುರಿತು ಸಭೆ ನಡೆಸಿದರು. ಬಿಜೆಪಿ ಮೇಲ್ಮನೆ ಸದಸ್ಯರು ಒಂದು ವಾರದ ಹಿಂದೆ ಸಭೆ ನಡೆಸಿದ್ದೆವು. ಅದೇ ವಿಷಯವನ್ನೂ ಎನ್‍ಡಿಎ ಅಂಗಪಕ್ಷ ಜೆಡಿಎಸ್ ಸದಸ್ಯರ ಜೊತೆ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಈ ಸರಕಾರದಿಂದ ಆಗಿರುವ ಅನಾಹುತಗಳು, ರಸ್ತೆ ಗುಂಡಿಗಳ ಸಮಸ್ಯೆ, ಕರ್ನಾಟಕದ ಆರ್ಥಿಕ ಸಮಸ್ಯೆ, ಕಾನೂನು- ಸುವ್ಯವಸ್ಥೆ ಹದಗೆಟ್ಟಿರುವುದು, ಶಿಕ್ಷಣ ಕ್ಷೇತ್ರದ ಅನಾಹುತಗಳನ್ನು ಮುಖ್ಯ ವಿಚಾರವಾಗಿ ಪರಿಗಣಿಸಲು ಎರಡೂ ಪಕ್ಷಗಳ ಮುಖಂಡರು ತೀರ್ಮಾನ ಮಾಡಿದ್ದೇವೆ ಎಂದು ವಿವರಿಸಿದರು.

ರಾಜ್ಯಾದ್ಯಂತ ರೈತರ ಸಮಸ್ಯೆಗಳು ದೊಡ್ಡದಾಗಿ ಮತ್ತು ವೇಗವಾಗಿ ಬೆಳೆಯುತ್ತಿವೆ. ಈ ಸರಕಾರ ಮಾತನಾಡುತ್ತದೆ; ಆದರೆ, ಕೆಲಸ ಮಾಡುತ್ತಿಲ್ಲ; ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ಸದನದಲ್ಲಿ ನಾವು ಸರಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಬೇಕು. ಕಾಲಹರಣ ಮಾಡದೇ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು. ರೈತರ ಸಮಸ್ಯೆಗಳನ್ನು ಆಮೂಲಾಗ್ರವಾಗಿ ಚಿಂತನೆ ಮಾಡಿ ಅವುಗಳಿಗೆ ಪರಿಹಾರ ನೀಡಬೇಕೆಂಬ ವಿಷಯವನ್ನೂ ಪರಿಗಣಿಸುತ್ತೇವೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಸಮಸ್ಯೆಗೆ ಆದ್ಯತೆ- ಸಭಾಪತಿಗಳಿಗೆ ಪತ್ರ
ಸರಕಾರ ಹೇಳುವುದನ್ನು ಮಾಡುತ್ತಿಲ್ಲ; ವಿಪಕ್ಷದವರು ಏನು ಬೇಕಾದರೂ ಮಾತನಾಡಲಿ; ನಾವು ನಮ್ಮಿಷ್ಟದಂತೆ ಮಾಡುತ್ತೇವೆಯೇ ಹೊರತು ಅವರ ಮಾತು ಕೇಳಬೇಕಿಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ವಿಶೇಷ ಚರ್ಚೆಗೆ ಪ್ರಾಮುಖ್ಯತೆ ನೀಡಬೇಕೆಂದು ನಾನು ಸಭಾಪತಿಗಳಿಗೂ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಸದನದಲ್ಲಿ 31 ವಿಧೇಯಕಗಳನ್ನು ಮಂಡಿಸುವ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಳಗಾವಿಯಲ್ಲಿ ಸದನ ನಡೆಸಲಾಗುತ್ತದೆ. ಅಲ್ಲಿ ಈಗಾಗಲೇ ಗುಲ್ಬರ್ಗದಿಂದ ಪ್ರತ್ಯೇಕ ರಾಜ್ಯದ ಅಪಸ್ವರ ಬರುತ್ತಿದ್ದವು. ಅದಕ್ಕಾಗಿ ಆರ್ಟಿಕಲ್ 371 ಜೆ ಮೂಲಕ ವಿಶೇಷ ಆದ್ಯತೆ ಕೊಡಲಾಗಿದೆ. ಜೊತೆಗೆ ಕೆಕೆಆರ್‍ಡಿಬಿಯನ್ನು ರಚಿಸಲಾಗಿದೆ. ಆ ಪ್ರಾಂತ್ಯಕ್ಕೆ ಒತ್ತು ಕೊಡುವ ಮತ್ತು ಹೆಚ್ಚು ಹಣ ನೀಡಿ ಅಭಿವೃದ್ಧಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಗಮನ ಸೆಳೆದರು.


Share this Story:

Follow Webdunia kannada

ಮುಂದಿನ ಸುದ್ದಿ

ಸುಳಿವು ಸಿಕ್ಕಿದ್ರೂ ದರೋಡೆಕೋರರನ್ನು ಬಂಧಿಸಿಲ್ಲ ಯಾಕೆ: ಆರ್ ಅಶೋಕ್ ಪ್ರಶ್ನೆ