Select Your Language

Notifications

webdunia
webdunia
webdunia
webdunia

ಸ್ಯಾನಿಟರಿ ಪ್ಯಾಡ್ ನಲ್ಲೂ ರಾಹುಲ್ ಗಾಂಧಿ ಫೋಟೋ: ಟ್ರೋಲ್ ಆದ ಕಾಂಗ್ರೆಸ್

Bihar congress

Krishnaveni K

ಪಾಟ್ನಾ , ಶನಿವಾರ, 5 ಜುಲೈ 2025 (10:47 IST)
Photo Credit: X
ಪಾಟ್ನಾ: ಬಿಹಾರದಲ್ಲಿ ಚುನಾವಣೆ ಪ್ರಚಾರದ ವೇಳೆ ಮಹಿಳೆಯರಿಗೆ ಕಾಂಗ್ರೆಸ್ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ಭರವಸೆ ನೀಡಿದೆ. ಆದರೆ ಸ್ಯಾನಿಟರಿ ಪ್ಯಾಡ್ ನಲ್ಲಿ ರಾಹುಲ್ ಗಾಂಧಿ ಫೋಟೋ ಹಾಕಿಕೊಂಡು ಈಗ ಕಾಂಗ್ರೆಸ್ ಟ್ರೋಲ್ ಗೊಳಗಾಗಿದೆ.

ಬಿಹಾರ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದೆ. ಅದರಂತೆ ಈಗ 5 ಲಕ್ಷ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಭರವಸೆ ನೀಡಿದೆ. ಅದರಂತೆ ಸ್ಯಾನಿಟರಿ ಪ್ಯಾಡ್ ಗಳ ಪ್ಯಾಕೆಟ್ ನ್ನೂ ಬಿಡುಗಡೆ ಮಾಡಿದೆ.

ಆದರೆ ಈ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋ ಲಗತ್ತಿಸಲಾಗಿದೆ. ಇದನ್ನು ಬಿಜೆಪಿ ಸೇರಿದಂತೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಸ್ಯಾನಿಟರಿ ಪ್ಯಾಡ್ ಗೂ ರಾಹುಲ್ ಫೋಟೋ ಬೇಕಾ ಎಂದು ತಮಾಷೆ ಮಾಡಿವೆ.

ಇದನ್ನು ಭರವಸೆ ಎನ್ನಲ್ಲ. ಇದು ಅತ್ಯಂತ ಕೀಳುಮಟ್ಟದ ಪ್ರಚಾರ. ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಕೀಳುಮಟ್ಟಕ್ಕಿಳಿದಿದೆ ಎಂದು ಬಿಜೆಪಿ ಟ್ರೋಲ್ ಮಾಡಿದೆ. ಈ ಪ್ಯಾಕೆಟ್ ಮೇಲೆ ಕಾಂಗ್ರೆಸ್ ಗೆದ್ದರೆ ಮಹಿಳೆಯರಿಗೆ 2,500 ರೂ. ಕೊಡುವುದಾಗಿಯೂ ಭರವಸೆ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ