ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಬಗ್ಗೆ ಹಲವು ಆಸಕ್ತಿಕರ ಸಂಗತಿಗಳು ಹೊರಬೀಳುತ್ತಿವೆ. ಪುಟಿನ್ ನಡೆಯುವಾಗ ಅವರ ಬಲಗೈ ಚಲಿಸುವುದೇ ಇಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ವ್ಲಾಡಿಮಿರ್ ಪುಟಿನ್ ನಡೆಯುವಾಗ ಒಂದು ಸ್ಟೈಲ್ ಇದೆ. ಅವರು ಯಾವಾಗಲೂ ತಮ್ಮ ಎಡಗೈಯನ್ನು ಹಿಂದೆ ಮುಂದೆ ಮಾಡುತ್ತಾ ನಡೆಯುತ್ತಾರೆ. ಆದರೆ ಬಲಗೈ ನಿಶ್ಚಲವಾಗಿರುತ್ತದೆ. ಕೆಲವರು ಇದು ಪಾರ್ಕಿನ್ ಸನ್ ಖಾಯಿಲೆಯ ಲಕ್ಷಣವಾಗಿರಬಹುದು ಎಂದುಕೊಂಡಿದ್ದರು. ಆದರೆ ಇದರ ಹಿಂದಿನ ಸತ್ಯ ಬೇರೆಯೇ ಇದೆ.
ಪುಟಿನ್ ಈ ಮೊದಲು ರಷ್ಯಾದಲ್ಲಿ ಸ್ಪೈ ಆಗಿ ಕೆಲಸ ಮಾಡಿದವರು. ರಷ್ಯಾದ ಪ್ರಮುಖ ಭದ್ರತಾ ಏಜೆನ್ಸಿಯಾಗಿದ್ದ ಕೆಜಿಬಿಯಲ್ಲಿ ಕೆಲಸ ಮಾಡಿದ್ದರು. ಇಲ್ಲಿ ಕೆಲಸ ಮಾಡುವ ಸ್ಪೈಗಳಿಗೆ ಯಾವತ್ತೂ ಅಲರ್ಟ್ ಆಗಿರುವಂತೆ, ಆಯುಧವನ್ನು ಬಳಸಲು ಸನ್ನದ್ಧವಾಗಿರುವಂತೆ ತರಬೇತಿ ನೀಡಲಾಗುತ್ತದೆ.
ಕೆಜಿಬಿಯಲ್ಲಿದ್ದಾಗ ಪುಟಿನ್ ಆಯುಧ ತರಬೇತಿ ಪಡೆದಿದ್ದರು. ಆಗ ನಡೆಯುವಾಗ ಒಂದು ಕೈಯಲ್ಲಿ ಜೇಬಿನ ಪಕ್ಕವೇ ಇಟ್ಟು ಯಾವುದೇ ಕ್ಷಣದಲ್ಲೂ ಮಿಂಚಿನಂತೆ ಗನ್ ತೆಗೆದುಕೊಳ್ಳಲು ಅಲರ್ಟ್ ಆಗಿರಲು ತರಬೇತಿ ನೀಡಲಾಗುತ್ತಿತ್ತು. ಇದೇ ಅಭ್ಯಾಸ ಬಲದಿಂದ ಪುಟಿನ್ ಈಗಲೂ ಒಂದು ಕೈಯಲ್ಲಿ ನಿಶ್ಚಲವಾಗಿಟ್ಟುಕೊಂಡು ಪಾಕೆಟ್ ಬಳಿಯೇ ಇಟ್ಟುಕೊಳ್ಳುತ್ತಾರೆ.