ನವದೆಹಲಿ: ಭಾರತಕ್ಕೆ ಬಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಾವ ದೇಶಕ್ಕೆ ಹೋದರೂ ಮಾಡದ ಕೆಲಸವನ್ನು ಇಲ್ಲಿ ಮಾಡಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಗೆ ಊರು ತುಂಬಾ ಶತ್ರುಗಳು. ಹಲವು ಬಾರಿ ಅವರ ಕೊಲೆ ಯತ್ನ ನಡೆದಿತ್ತು. ಹೀಗಾಗಿ ವಿದೇಶಗಳಿಗೆ ಹೋಗುವಾಗ ಅವರ ಭದ್ರತೆ ಅಷ್ಟು ಬಿಗುವಾಗಿರುತ್ತದೆ. ವಿದೇಶಗಳಿಗೆ ಹೋಗುವಾಗಲೂ ಪ್ರತಿಯೊಂದಕ್ಕೂ ತಮ್ಮದೇ ದೇಶದಿಂದ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ.
ಆಹಾರದಿಂದ ಹಿಡಿದು ಕಾರಿನವರೆಗೂ ಎಲ್ಲವೂ ರಷ್ಯಾದಿಂದಲೇ ಪ್ಯಾಕ್ ಆಗುತ್ತದೆ. ವಿದೇಶಗಳಿಗೆ ಹೋಗುವಾಗಲೂ ಅವರು ತಮ್ಮ ಅತೀವ ಭದ್ರತೆಯಿರುವ ಕಾರನ್ನು ಬಿಟ್ಟು ಬೇರೆ ಕಾರನ್ನು ಬಳಸಲ್ಲ. ಆದರೆ ಭಾರತಕ್ಕೆ ಬಂದ ಬೆನ್ನಲ್ಲೇ ಅವರು ಆ ಕಟ್ಟುನಿಟ್ಟುಗಳನ್ನು ಸಡಿಸಿಲಿದ್ದಾರೆ.
ತಮ್ಮ ಭಾರೀ ಸುರಕ್ಷತೆಯ ಕಾರು ಬಿಟ್ಟು ಪ್ರಧಾನಿ ಮೋದಿಯವರ ಟಯೋಟಾ ಕಾರಿನಲ್ಲೇ ಜೊತೆಯಾಗಿ ಪ್ರಯಾಣ ಮಾಡಿದ್ದಾರೆ. ಇದು ಮೋದಿ ಮತ್ತು ಭಾರತದ ಮೇಲೆ ಪುಟಿನ್ ಗಿರುವ ನಂಬಿಕೆ ಮತ್ತು ವಿಶ್ವಾಸ.