Select Your Language

Notifications

webdunia
webdunia
webdunia
webdunia

ಭಾರತಕ್ಕೆ ಬರಲಿರುವ ವ್ಲಾಡಿಮಿರ್ ಪುಟಿನ್ ಮಲ, ಮೂತ್ರವೂ ರಷ್ಯಾಗೆ ವಾಪಸ್: ಕಾರಣವೇನು ಗೊತ್ತಾ

Vladimir Putin

Krishnaveni K

ನವದೆಹಲಿ , ಗುರುವಾರ, 4 ಡಿಸೆಂಬರ್ 2025 (10:53 IST)
ನವದೆಹಲಿ: ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡುತ್ತಿದ್ದಾರೆ. ಪುಟಿನ್ ಭದ್ರತೆಗೆ ಐದು ಸ್ತರದ ಕ್ರಮ ಕೈಗೊಳ್ಳಲಾಗಿದೆ. ಎಷ್ಟರಮಟ್ಟಿಗೆ ಎಂದರೆ ಪುಟಿನ್ ಮಲ, ಮೂತ್ರವೂ ರಷ್ಯಾಗೇ ವಾಪಸ್ ಆಗಲಿದೆ. ಇದಕ್ಕೆ ಕಾರಣವೇನು ಗೊತ್ತಾ?

ಪುಟಿನ್ ಗೆ ಎಂಥಾ ಭದ್ರತೆ ಒದಗಿಸಲಾಗಿದೆ ಎಂದರೆ ಅವರ ಬಳಿ ಒಂದು ಒಪ್ಪಿಗೆಯಿಲ್ಲದೇ ಒಂದು ಸೊಳ್ಳೆಯೂ ಸುಳಿಯದು. ಭದ್ರತೆಗೆ 35 ವರ್ಷದೊಳಗಿನ ಸಿಬ್ಬಂದಿಗಳನ್ನೇ ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿ 5.8 ರಿಂದ 6.2 ಅಡಿ ಎತ್ತರದವರೇ ಆಗಿರಬೇಕು. ಪುಟಿನ್ ಸಂಚಿರಿಸುವ ಕಾರು ಪಂಕ್ಚರ್ ಆದರೂ ಸಲೀಸಾಗಿಯೇ ಚಲಿಸಬಲ್ಲದು.

ಶಸ್ತ್ರಸಜ್ಜಿತ ಐಷಾರಾಮಿ ಕಾರು ಔರಸ್ ಸೆನಾಟ್ ಮಾಸ್ಕೋದಿಂದಲೇ ತರಿಸಲಾಗುತ್ತಿದೆ. ಸುಸಜ್ಜಿತ ಕ್ಯಾಮರಾಗಳು, ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆ ಸಿಬ್ಬಂದಿ ಜೊತೆಗೆ ಭಾರತದ ಎನ್ ಎಸ್ ಜಿ ಕಮಾಂಡೋಗಳೂ ಭದ್ರತೆ ಒದಗಿಸಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪುಟಿನ್ ಮಲ, ಮೂತ್ರವನ್ನೂ ರಷ್ಯಾಗೆ ವಾಪಸ್ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಮಲ, ಮೂತ್ರ ಸಂಗ್ರಹಿಸಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಬಹುದು ಎಂಬುದು ರಷ್ಯಾ ಆತಂಕ. ಇದಕ್ಕಾಗಿ ಮಲ,ಮೂತ್ರ ಸಂಗ್ರಹಿಸಲು ಪೂಪ್ ಸೂಟ್ ಕೇಸ್ ಗಳನ್ನೂ ಭಾರತಕ್ಕೆ ತರಲಾಗಿದೆ. ಜೊತೆಗೆ ಅವರಿಗೆ ನೀಡಲಾಗುವ ಆಹಾರವನ್ನೂ ಲ್ಯಾಬ್ ನಲ್ಲಿ ಪರೀಕ್ಷಿಸಿ ಬಳಿಕ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುರ್ಚಿ ಕದನದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ