Publish Date: Sat, 29 Nov 2025 (09:16 IST)
Updated Date: Sat, 29 Nov 2025 (09:18 IST)
ಬೆಂಗಳೂರು: ಪ್ರಧಾನಿ ಮೋದಿ ಉಡಪಿ ಭೇಟಿ ಬಗ್ಗೆ ವ್ಯಂಗ್ಯ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು, ನಿಮ್ ಕ್ಷೇತ್ರ ನೋಡ್ಕೊಳ್ಳಿ ಎಂದಿದ್ದಾರೆ.
ನಿನ್ನೆ ಉಡುಪಿ ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಕನಕನಕಿಂಡಿಯಿಂದ ಕೃಷ್ಣ ದರ್ಶನ ಮಾಡಿದ್ದರು. ಇದಕ್ಕೆ ಮಾಧ್ಯಮಗಳ ಮುಂದೆ ವ್ಯಂಗ್ಯ ಮಾಡಿದ್ದ ಪ್ರಿಯಾಂಕ್ ಖರ್ಗೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೆಕ್ಕೆಜೋಳಕ್ಕೆ ಕನಿಷ್ಠ ಬೆಲೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ನಮ್ಮ ಮುಖ್ಯಮಂತ್ರಿಗಳು ಮುಂದಿಟ್ಟಿದ್ದಾರೆ. ಅದಕ್ಕೆ ಪರಿಹಾರ ಕೊಡಲಿ. ಅದು ಬಿಟ್ಟು ಸುಮ್ನೇ ಬಂದು ಕನಕನಕಿಂಡಿಯಲ್ಲಿ ದರ್ಶನ ಮಾಡಿಕೊಂಡು ಹೋದರೆ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದರು.
ಅವರ ಈ ಕಾಮೆಂಟ್ ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ನಿಮ್ಮ ಕ್ಷೇತ್ರ ಮೊದಲು ನೋಡಿಕೊಳ್ಳಿ. ಎಲ್ಲಾ ಸಮಸ್ಯೆಗಳಿಗೂ ಮೋದಿಯೇ ಬಂದು ಪರಿಹಾರ ಕೊಡಬೇಕು ಎಂದರೆ ನಿಮ್ಮ ಸರ್ಕಾರ ಇರುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮೋದಿ ದೇವಾಲಯಕ್ಕೆ ಬಂದರೂ ನೀವು ಯಾಕೆ ಹೊಟ್ಟೆ ಉರ್ಕೊಳ್ತೀರಿ ಎಂದಿದ್ದಾರೆ.