Publish Date: Sat, 29 Nov 2025 (09:08 IST)
Updated Date: Sat, 29 Nov 2025 (09:11 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಂದು ಹೈಕಮಾಂಡ್ ಅಣತಿ ಮೇರೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ಈ ಸಭೆಯಲ್ಲಿ ಏನು ಮಾತನಾಡಲಿದ್ದಾರೆ.
ರಾಜ್ಯದಲ್ಲಿ ಕುರ್ಚಿ ಕುಸ್ತಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಹೀಗಾಗಿ ಉಭಯ ನಾಯಕರಿಗೆ ಜೊತೆಗೂ ಕೂತು ಮಾತುಕತೆ ಮಾಡಿ ನಂತರ ಹೈಕಮಾಂಡ್ ನಾಯಕರ ಮುಂದೆ ಬರಲು ಸೂಚಿಸಿದೆ. ಹೀಗಾಗಿ ಡಿಕೆ ಶಿವಕುಮಾರ್ ಗೆ ಬ್ರೇಕ್ ಫಾಸ್ಟ್ ಗೆ ಬರಲು ಸಿದ್ದರಾಮಯ್ಯ ಆಹ್ವಾನವಿತ್ತಿದ್ದಾರೆ.
ಸಿದ್ದರಾಮಯ್ಯನಂತೆ ಡಿಕೆಶಿಗೂ ಕರೆ ಮಾಡಿ ಹೈಕಮಾಂಡ್ ಮೀಟಿಂಗ್ ನಡೆಸಲು ಸೂಚಿಸಿದೆ. ಹೀಗಾಗಿ ಡಿಕೆಶಿ ಇಂದು ಸಿದ್ದು ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ನಡೆಸುವ ಮಾತುಕತೆ ಅಧಿಕಾರ ಹಂಚಿಕೆ ಫೈಟ್ ಗೆ ಮಹತ್ವದ ಟ್ವಿಸ್ಟ್ ನೀಡಲಿದೆ. ಒಂದು ವೇಳೆ ಇಂದು ಡಿಕೆಶಿ ತಮ್ಮ ಹಠಕ್ಕೆ ಕಟ್ಟು ಬಿದ್ದರೆ ಇದರ ಬಗ್ಗೆ ಸಿದ್ದರಾಮಯ್ಯ ಹೈಕಮಾಂಡ್ ಗೆ ವರದಿ ಸಲ್ಲಿಸಬಹುದು. ಒಟ್ಟಿನಲ್ಲಿ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಭಾರೀ ಮಹತ್ವ ಪಡೆದುಕೊಂಡಿದೆ.