ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಹಲವು ಆಸಕ್ತಿದಾಯಕ ವಿಚಾರಗಳು ಹೊರಬೀಳುತ್ತಿವೆ. ಪುಟಿನ್ ಜೊತೆ ಎಲ್ಲೂ ಅವರ ಪತ್ನಿ ಕಾಣಿಸಿಕೊಳ್ಳಲ್ಲ ಯಾಕೆ? ಅದಕ್ಕೂ ಕಾರಣವಿದೆ.
ವಿಶ್ವದ ಪವರ್ ಫುಲ್ ಅಧ್ಯಕ್ಷರಲ್ಲಿ ಪುಟಿನ್ ಕೂಡಾ ಒಬ್ಬರು. ಅವರ ಹತ್ಯೆಗೆ ಹಲವು ಬಾರಿ ಸಂಚುಗಳು ನಡೆದಿವೆ. ಹೀಗಾಗಿ ಎಲ್ಲೇ ಹೋಗುವುದಿದ್ದರೂ ಅವರ ಭದ್ರತೆ ಆ ಮಟ್ಟದಲ್ಲಿರುತ್ತದೆ. ಹೊರ ದೇಶಗಳಿಗೆ ಹೋಗುವಾಗಲೂ ಅವರ ಭದ್ರತೆ ಹೊಣೆಯನ್ನು ರಷ್ಯಾದ ಸಿಬ್ಬಂದಿಗಳೇ ನೋಡಿಕೊಳ್ಳುತ್ತಾರೆ.
ಹೊರದೇಶಗಳಲ್ಲಿ ಆಹಾರವನ್ನೂ ಸ್ವೀಕರಿಸಲ್ಲ. ಪುಟಿನ್ ಗೆ ಬೇಕಾದ ಆಹಾರ ಮಾಸ್ಕೋದಿಂದಲೇ ಹೋಗುತ್ತದೆ. ಆಹಾರ ಸ್ವೀಕರಿಸುವ ಮೊದಲು ಅದು ವಿಷಕಾರಿಯಾಗಿಲ್ಲ ಎಂದು ಖಚಿತಪಡಿಸಲು ಪ್ರತ್ಯೇಕ ತಂಡವೇ ಇರುತ್ತದೆ.
ಇಂತಿಪ್ಪ ಪುಟಿನ್ ಗೂ ಪತ್ನಿ ಮಕ್ಕಳು ಇದ್ದಾರೆ. ಮೂಲಗಳ ಪ್ರಕಾರ ಅವರಿಗೆ ಎರಡು ಮದುವೆಯಾಗಿದೆ. ಮಾಜಿ ಪತ್ನಿ ಮತ್ತು ಈಗಿನ ಪತ್ನಿಯರಿಂದ ತಲಾ 2 ರಂತೆ ನಾಲ್ವರು ಮಕ್ಕಳಿದ್ದಾರೆ. ಆದರೆ ಅವರ ಪತ್ನಿ, ಮಕ್ಕಳು ಎಲ್ಲೂ ಹೊರಗೆ ಕಾಣಿಸಲ್ಲ. ಪುಟಿನ್ ಜೊತೆ ಎಲ್ಲೂ ಪ್ರವಾಸ ಮಾಡಲ್ಲ.