Photos: X
ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಪ್ರಧಾನಿ ಮೋದಿ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಇದರಲ್ಲಿರೋ ವಿಶೇಷತೆ ಏನು ಗೊತ್ತಾ?
ನಿನ್ನೆ ಸಂಜೆ ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್ ರನ್ನು ಸ್ವತಃ ತಾವೇ ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಧಾನಿ ಮೋದಿ ಸ್ವಾಗತಿಸಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಪ್ರಧಾನಿ ಮೋದಿಗಿರುವ ಸ್ನೇಹ ಸಂಬಂಧಕ್ಕೆ ಇದು ಸಾಕ್ಷಿಯಾಗಿದೆ.
ಇನ್ನು, ಪುಟಿನ್ ಗೆ ಪ್ರಧಾನಿ ಮೋದಿ ಪವಿತ್ರ ಧರ್ಮ ಗ್ರಂಥ ಭಗವದ್ಗೀತೆಯ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಸ್ಕಾನ್ ನ ಭಗವದ್ಗೀತೆಯ ಪುಸ್ತಕವೊಂದನ್ನು ನೀಡಿದ್ದಾರೆ. ಈ ಪುಸ್ತಕ ರಷ್ಯಾ ಭಾಷೆಯಲ್ಲಿದೆ ಎನ್ನುವುದೇ ವಿಶೇಷ.
ಪುಟಿನ್ ರಷ್ಯನ್ ಭಾಷೆ ಬಿಟ್ಟು ಬೇರೆ ಭಾಷೆ ಬಳಸಲ್ಲ. ಹೀಗಾಗಿ ಅವರಿಗೆ ರಷ್ಯಾ ಭಾಷೆಯಲ್ಲಿರುವ ಭಗವದ್ಗೀತೆಯನ್ನೇ ಉಡುಗೊರೆ ನೀಡಿದ್ದಾರೆ. ಜಗತ್ತಿನ 110 ಭಾಷೆಗಳಿಗೆ ಭಗವದ್ಗೀತೆ ಪ್ರಕಟಿಸಲಾಗಿದೆ. ಇದೀಗ ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆಯನ್ನು ಪುಟಿನ್ ಗೆ ನೀಡಲಾಗಿದೆ.