ಹೈದರಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಸಾಧನೆಯ ಜತೆಗೆ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಗಮನ ಸೆಳೆಯುತ್ತಲೇ ಇರುತ್ತಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುವ ಸಾನಿಯಾ ಮಿರ್ಚಾ ಅವರು ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಹಂಚಿಕೊಂಡ ಫೋಸ್ಟ್ ಭಾರೀ ಕುತೂಹಲವನ್ನು ಮೂಡಿಸಿದೆ.
ಪಾಕ್ ಕ್ರಿಕೆಟಿಗ ಸೊಯೈಬ್ ಮಲಿಕ್ ಅವರನ್ನು 2010ರಲ್ಲಿ ಮದುವೆಯಾಗಿದ್ದ ಸಾನಿಯಾ ಅವರು 2023ರಲ್ಲಿ ವಿಚ್ಛೇಧನ ಪಡೆದು ದೂರವಾದರು. ಈ ಜೋಡಿಗೆ ಒಬ್ಬ ಮಗನಿದ್ದಾನೆ.
ಇದೀಗ ಸಾನಿಯಾ ಅವರು ಮಗನೊಂದಿಗೆ ಜೀವನ ಕಳೆಯುತ್ತಿದ್ದಾರೆ. ಆದರೆ ಸಾನಿಯಾ ಅವರ ಹೆಸರು ಆಗಾಗ ಕೆಲ ಆಟಗಾರರ ಜತೆ ಕೇಳಿಬರುತ್ತದೆ. ಆದರೆ ಇದಕ್ಕೆಲ್ಲ ಸಾನಿಯಾ ಅವರು ಯಾವುದೇ ಸ್ಪಷ್ಟನೆಯನ್ನು ನೀಡುತ್ತಿರಲಿಲ್ಲ.
ಇದೀಗ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋವೊಂದು ಭಾರೀ ಕುತೂಹಲವನ್ನು ಮೂಡಿಸಿದೆ. ಈ ಫೋಟೋದಲ್ಲಿ ಸಾನಿಯಾ ಅವರು ತಮ್ಮ ಮಗ ಹಾಗೂ ಮತ್ತೊಬ್ಬ ವ್ಯಕ್ತಿ ಜತೆಗಿನ ನೆರಳಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರು, ಆ ಮೂರನೇ ವ್ಯಕ್ತಿ ಯಾರೆಂದು ಪ್ರಶ್ನೆ ಹಾಕಿದ್ದಾರೆ.
ಸಾನಿಯಾ ಏನಾದ್ರೂ ಮತ್ತೆ ಪ್ರೀತಿಯಲ್ಲಿ ಬಿದ್ರಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ.