ಬೆಂಗಳೂರು: ನವೆಂಬರ್ 28 ರಂದು ಬೆಂಗಳೂರಿನ ಪಬ್‌ನಲ್ಲಿ ತನ್ನ ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ವಿರುದ್ಧ ಇದೀಗ ದೂರು ದಾಖಲಾಗಿದೆ.
ಕಾಂಗ್ರೆಸ್ ನಾಯಕರಾದ ಹ್ಯಾರೀಶ್ ಹಾಗೂ ಜಮೀರ್ ಅಹ್ಮದ್ ಪುತ್ರರಾದ ನಲಪಾಡ್ ಹಾಗೂ ಝೈದ್ ಜತೆ ಪಬ್‌ಗೆ ಬಂದಿದ್ದ ಆರ್ಯನ್ ಖಾನ್, ಜನರತ್ತ ತನ್ನ ಮಧ್ಯದ ಬೆರಳನ್ನು ತೋರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಸೂಪರ್ ಸ್ಟಾರ್ ಮಗನ ಪುತ್ರನ ಇದೆಂಥಾ ದುರ್ವತನೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಅದಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ವ್ಯಕ್ತವಾಗಿತ್ತು. ಇದೀಗ ನಟ ಹಾಗೂ ನಿರ್ದೇಶಕ ಆರ್ಯನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಯಾಂಕಿ ರಸ್ತೆಯ ನಿವಾಸಿ ವಕೀಲ ಓವೈಜ್ ಹುಸೇನ್ ಎಸ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ, ಡಿಸಿಪಿ (ಕೇಂದ್ರ ವಿಭಾಗ), ಕಬ್ಬನ್ ಪಾರ್ಕ್ ರಾಜ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಸಾರ್ವಜನಿಕರ ಸಮ್ಮುಖದಲ್ಲಿ ಅಶ್ಲೀಲ ವರ್ತನೆ ಎಂದು ವಿವರಿಸಿದ್ದಕ್ಕಾಗಿ ಆರ್ಯನ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅವರು ಕೋರಿದರು.