ಬೆಂಗಳೂರು: ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್ ಎಷ್ಟು ತೂಕ ಕಳೆದುಕೊಂಡಿದ್ದಾರೆ ಗೊತ್ತಾ? ನಿಜಕ್ಕೂ ಶಾಕಿಂಗ್ ಆಗಿದೆ. ಆದರೆ ಇದರಿಂದ ಒಂದು ಪ್ಲಸ್ ಪಾಯಿಂಟ್ ಕೂಡಾ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮೊದಲ ಅವಧಿಯಲ್ಲಿ ಜೈಲಿನಲ್ಲಿದ್ದಾಗಲೇ ತೂಕ ಇಳಿಸಿಕೊಂಡಿದ್ದರು. ಬೇಕು ಬೇಕಾದಂತೆ ಮಾಂಸಾಹಾರ, ಕಟ್ಟುನಿಟ್ಟಿನ ಡಯಟ್ ಮಾಡುತ್ತಿದ್ದ ದರ್ಶನ್ ಜೈಲಿನಲ್ಲಿ ಬೇಕಾದ ಊಟ ಸಿಗದೇ ಸೊರಗಿದ್ದರು.
ಆದರೆ ಮೊದಲ ಅವಧಿಯಲ್ಲಿ ಅವರಿಗೆ ಬೆನ್ನು ನೋವು ಬಿಡದೇ ಕಾಡಿತ್ತು. ಇದೇ ನೆಪದಲ್ಲಿ ಅವರಿಗೆ ಜಾಮೀನು ಕೂಡಾ ಮಂಜೂರಾಗಿತ್ತು. ಆದರೆ ನಂತರ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನಲೆಯಲ್ಲಿ ಮತ್ತೆ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಈ ಬಾರಿ ಅವರಿಗೆ 10 ರಿಂದ 12 ಕೆ.ಜಿ. ತೂಕ ಇಳಿಕೆಯಾಗಿದೆ ಎನ್ನಲಾಗಿದೆ. ತೂಕ ಇಳಿಕೆಯಿಂದ ಅವರಿಗೆ ಪ್ಲಸ್ ಪಾಯಿಂಟ್ ಕೂಡಾ ಆಗಿದೆ. ಅವರಿಗೆ ಈಗ ಬೆನ್ನು ನೋವು ತಕ್ಕಮಟ್ಟಿಗೆ ನಿವಾರಣೆಯಾಗಿದೆ ಎನ್ನಲಾಗಿದ್ದು, ತಪಾಸಣೆ ಬಳಿಕ ವೈದ್ಯರ ತಂಡ ಕೂಡಾ ವರದಿ ನೀಡಿದೆ.