ಬೆಂಗಳೂರು: ಸಿಸಿಬಿ ವಿಚಾರಣೆ ಬೆನ್ನಲ್ಲೇ ಯಾವುದಕ್ಕೂ ಬಗ್ಗಲ್ಲ, ಏನೇ ಆದ್ರೂ ದರ್ಶನ್ ಜೊತೆಗೇ ನಿಲ್ಲುತ್ತೇನೆ ಎಂಬರ್ಥದಲ್ಲಿ ನಟ ಧನ್ವೀರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿನ ಕರ್ಮಕಾಂಡಗಳ ವಿಡಿಯೋ ಹರಿಯಿಬಿಟ್ಟವರಿಗಾಗಿ ಈಗ ಖಾಕಿ ಬಲೆ ಬೀಸಿದೆ. ಇದೇ ಸಂಬಂಧ ದರ್ಶನ್ ಆಪ್ತ ಧನ್ವೀರ್ ಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇದರ ಬೆನ್ನಲ್ಲೇ ಧನ್ವೀರ್ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗೆ ನಿಂತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗಿರುವುದರ ಹಿಂದೆ ಧನ್ವೀರ್ ಕೈವಾಡವಿದೆಯೇ ಎಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಧನ್ವೀರ್ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಧನ್ವೀರ್ ರನ್ನು ವಿಚಾರಣೆ ನಡೆಸುತ್ತಿದ್ದಂತೇ ದರ್ಶನ್ ಫ್ಯಾನ್ಸ್ ಆಕ್ರೋಶಗೊಂಡಿದ್ದು, ಈ ವಿಚಾರಣೆ ಎಲ್ಲಾ ದರ್ಶನ್ ಆಪ್ತ ಎಂಬ ಕಾರಣಕ್ಕಾ ಎಂದು ಕೆಂಡ ಕಾರಿದ್ದಾರೆ.